‘ಗೌರಿ’ ಟ್ರೇಲರ್‌ ಬಿಡುಗಡೆ

ಇಂದ್ರಜಿತ್ ಲಂಕೇಶ್  ಆಕ್ಷನ್‌ ಕಟ್‌ ಹೇಳಿರುವ ‘ಗೌರಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ನಟ ಕಿಚ್ಚ ಸುದೀಪ್‌, ನಟಿ ಪ್ರಿಯಾಂಕಾ ಉಪೇಂದ್ರ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಇಂದ್ರಜಿತ್ ಲಂಕೇಶ್  ಪುತ್ರ ಸಮರ್ಜಿತ್‌ ಲಂಕೇಶ್‌ ನಾಯಕನಾಗಿ ನಟಿಸಿದ್ದು, ಸಾನ್ಯ ಅಯ್ಯರ್‌ ಜೋಡಿಯಾಗಿದ್ದಾರೆ. ಪ್ರೇಮಕಥೆ ಹೊಂದಿರುವ ಚಿತ್ರದಲ್ಲಿ ಹಾಡು, ಫೈಟ್‌ಗಳು ಹೇರಳವಾಗಿವೆ.

‘ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಕಥೆಯನ್ನು ಪ್ರತಿನಿಧಿಸುವ ಸಿನಿಮಾವಿದು. ಈಗಿನ ಯುವಜನತೆಗೆ ಸ್ಫೂರ್ತಿ ಸಂದೇಶವನ್ನು ಇದರಲ್ಲಿ ನಿರೀಕ್ಷೆ ಮಾಡಬಹುದು. ಚಿತ್ರದಲ್ಲಿ  ಏಳು ಹಾಡುಗಳಿದ್ದು, ಐದು ಜನ ಸಂಗೀತ ನಿರ್ದೇಶಕರು ಸಂಗೀತ ನೀಡಿದ್ದಾರೆ. ದೇಶದ ಜನಪ್ರಿಯ ಗಾಯಕರು ಹಾಡಿದ್ದಾರೆ’ ಎಂದರು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌.

ಪ್ರಿಯಾಂಕಾ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಮಾನಸಿ ಸುಧೀರ್, ಸಂಪತ್‌ ಮೈತ್ರೇಯ, ಲೂಸ್‌ಮಾದ ಯೋಗಿ, ಅಕುಲ್‌ ಬಾಲಾಜಿ ತಾರಾಗಣದಲ್ಲಿದ್ದಾರೆ.

ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆಯಿದೆ.

 ನೈಜ ಘಟನೆ ಆಧಾರಿತ ಚಿತ್ರ ಗೌರಿ ಆಗಸ್ಟ್ 15 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ರವಿಚಂದ್ರನ್ ಅವರ ಪ್ರೇಮಲೋಕದ ನಂತರ ಹಾಡುಗಳಲ್ಲಿ ಕಥೆ ಹೇಳುವ ಪ್ರಯತ್ನವನ್ನು ಗೌರಿ ಚಿತ್ರದಲ್ಲಿ ಮಾಡಲಾಗಿದೆ. ನೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದ್ದು ಚಿತ್ರದ ಬಿಡುಗಡೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!