ಇಂದ್ರಜಿತ್ ಲಂಕೇಶ್ ನಿರ್ದೇಶನದ ನೈಜ ಘಟನೆ ಆಧಾರಿತ ಚಿತ್ರ ಗೌರಿ ಆಗಸ್ಟ್ 15 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ರವಿಚಂದ್ರನ್ ಅವರ ಪ್ರೇಮಲೋಕದ ನಂತರ ಹಾಡುಗಳಲ್ಲಿ ಕಥೆ ಹೇಳುವ ಪ್ರಯತ್ನವನ್ನು ಗೌರಿ ಚಿತ್ರದಲ್ಲಿ ಮಾಡಲಾಗಿದೆ. ನೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದ್ದು ಚಿತ್ರದ ಬಿಡುಗಡೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗೌರಿ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಲಾಫಿಂಗ್ ಬುದ್ಧ ನಿರ್ಮಾಣ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ.
ಈ ಚಿತ್ರ ಬಹು ತಾರಾಗಣವನ್ನು ಹೊಂದಿದೆ. ಮಾಲತಿ ಸುಧೀರ್, ಸಂಪತ್ ಮೈತ್ರೆಯ, ಲೂಸ್ ಮಾದ ಯೋಗಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಪ್ರಿಯಾಂಕ ಉಪೇಂದ್ರ, ವಸುಂಧರ ದಾಸ್ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಎಜೆ ಶೆಟ್ಟಿ ಹಾಗೂ ಕೆ ಕೃಷ್ಣಕುಮಾರ್ ಅವರ ಛಾಯಾಗ್ರಾಹಣ ಇದೆ. ಸುಂದರ ತಾಣಗಳಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.
ಗೌರಿ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿವೆ. ಫೋಟೋ 5 ಸಂಗೀತ ನಿರ್ದೇಶಕರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆಯ ಮೂಲಕ ಗಮನ ಸೆಳೆದಿದ್ದಾರೆ. ಕೆ ಕಲ್ಯಾಣ್, ವರದರಾಜ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.
ಒಳ್ಳೆ ಟೈಮ್ ಬರತ್ತೆ ಹಾಡು ವೈರಲ್ ಆಗಿದೆ. ಚಂದನ್ ಶೆಟ್ಟಿ ಅವರ ಈ ಹಾಡಿಗೆ ಸಮರ್ಜಿತ್ ಲಂಕೇಶ್ ಒಂದೇ ಟೇಕ್ ನಲ್ಲಿ ಡಾನ್ಸ್ ಮಾಡಿರುವುದು ಹೆಗ್ಗಳಿಕೆ ಆಗಿದೆ. ಆರ್ಸಿಬಿ ತಂಡದ ಕನ್ನಡತಿ ಶ್ರಿಯಾಂಕ ಪಾಟೀಲ್ ಈ ಹಾಡಿಗೆ ಸ್ಟೆಪ್ ಹಾಕಿ ಸಖತ್ ವೈರಲ್ ಆಗಿದೆ. ಕೈಲಾಸ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರೀ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಸಮರ್ಜಿತ್ ಲಂಕೇಶ್ ಇತರರು ಈ ಹಾಡನ್ನು ಹಾಡಿದ್ದಾರೆ.
ಹುಬ್ಬಳ್ಳಿ ಕೆಎಲ್ಇ ಕಾಲೇಜಿನಲ್ಲಿ ಬಿಡುಗಡೆಗೊಂಡ ಹುಬ್ಬಳ್ಳಿ ಜವಾರಿ ಶೈಲಿಯ ಧೂಳ್ ಎಬ್ಬಿಸ್ತಿದೆ ಸಾಂಗ್ ಟ್ರೆಂಡಿಂಗ್ ಆಗಿದೆ. ಸಮರ್ಜಿತ್ ಹಾಗೂ ಸಂಜನಾ ಆನಂದ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶಿವು ಬೇರ್ಗಿ ಸಾಹಿತ್ಯ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ ಶಾಸ್ತ್ರಿ ಮತ್ತು ಅನನ್ಯ ಭಟ್ ಅವರು ಹಾಡಿದ್ದಾರೆ.
____
Be the first to comment