‘ಗೌರಿ’ ಹಾಡು ಬಿಡುಗಡೆ ಮಾಡಿದ ಧ್ಯಾನ್‍ ಮತ್ತು ಸದಾ

‘ಮೊನಾಲಿಸಾ’ ಚಿತ್ರದ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಧ್ಯಾನ್‍ ಮತ್ತು ಸದಾ ‘ಗೌರಿ’ ಚಿತ್ರದ ಹಾಡು ಬಿಡುಗಡೆ ಮಾಡಿದ್ದಾರೆ.

‘ಮುದ್ದಾದ ನಿನ್ನ ಹೆಸರೇನು’ ಎಂದು ಶುರುವಾಗುವ ಈ ಹಾಡಿನಲ್ಲಿ ಸಮರ್ಜಿತ್‍ ಲಂಕೇಶ್‍ ಮತ್ತು ಸಾನ್ಯ ಅಯ್ಯರ್‍ ಕಾಣಿಸಿಕೊಂಡಿದ್ದಾರೆ. ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಕವಿರಾಜ್ ಹಾಡು ಬರೆದಿದ್ದಾರೆ. ನಿಹಾಲ್‍ ತೌರೋ  ಹಾಡಿಗೆ ಧ್ವನಿಯಾಗಿದ್ದಾರೆ.

ಇಂದ್ರಜಿತ್‍ ಲಂಕೇಶ್‍ ನಿರ್ದೇಶನದ ‘ಮೊನಾಲಿಸಾ’ ಚಿತ್ರ ಬಿಡುಗಡೆಯಾಗಿ 20 ವರ್ಷಗಳಾಗಿವೆ. 2004ರ ಮೇ 7ರಂದು ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.  20 ವರ್ಷಗಳ ಸಂಭ್ರಮದಲ್ಲಿ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದ ಧ್ಯಾನ್‍ ಮತ್ತು ಸದಾ ಸಮ್ಮುಖದಲ್ಲಿ ‘ಗೌರಿ’ ಚಿತ್ರದ ಹಾಡು ಬಿಡುಗಡೆ ಮಾಡಿದ್ದಾರೆ.

ನೈಜ ಘಟನೆ ಆಧರಿಸಿ ನಿರ್ಮಾಣವಾಗಿರುವ ‘ಗೌರಿ’ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಮಿಕ್ಕಂತೆ ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ‘ಕಾಂತಾರ’ ಖ್ಯಾತಿಯ ಮಾಲತಿ ಸುಧೀರ್ ಸಂಪತ್ ಮೈತ್ರೇಯ, ಚಂದುಗೌಡ  ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್‍ ಛಾಯಾಗ್ರಹಣ ಮಾಡಿದ್ದಾರೆ.

ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ  ಹಾಡು ಬಿಡುಗಡೆ ಆಗಿದೆ.  ‘ಗೌರಿ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿದೆ. ಚಿತ್ರವನ್ನು ಜನರಿಗೆ ಮುಟ್ಟಿಸಲು ಇಂದ್ರಜಿತ್ ನೂರೆಂಟು ತರದ ಪ್ರಚಾರ ಮಾಡುತ್ತಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!