ಕಿಟ್ಟಿಯ ‘ಗೌಳಿ’ ಟೀಸರ್‌ ರಿಲೀಸ್

ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಗೌಳಿ’ ಸಿನಿಮಾದ ಟೀಸರ್‌ ಬಿಡುಗಡೆ ಆಗಿದ್ದು ಹೊಸ ಅವತಾರದಲ್ಲಿ ಕಿಟ್ಟಿ ಗಮನ ಸೆಳೆದಿದ್ದಾರೆ.

‘ಗೌಳಿ’ ಸಿನಿಮಾ ನಿಜ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾ ಎಂದು ಟೀಸರ್‌ನಲ್ಲಿ ಹೇಳಲಾಗಿದೆ. ಸಿನಿಮಾವು ಗೌಳಿ ಸಮುದಾಯದ ಜನರ ಕತೆಯಿರಬಹುದೆಂಬ ಊಹೆ ಟೀಸರ್‌ ನೋಡಿದ ಬಳಿಕ ಮೂಡುತ್ತದೆ. ಭಯಂಕರ ಎನಿಸುವ ಫೈಟ್‌, ಆಕ್ಷನ್‌ ದೃಶ್ಯಗಳು ಟೀಸರ್‌ ನಲ್ಲಿ ಕಂಡು ಬಂದಿದೆ. ಶ್ರೀನಗರ ಕಿಟ್ಟಿ ಅವರ ಈವರೆಗಿನ ಎಲ್ಲ ಸಿನಿಮಾಗಳಿಗಿಂತಲೂ ಈ ಚಿತ್ರ ಭಿನ್ನವಾಗಿದೆ ಎನ್ನುವುದು ಟೀಸರ್‌ ನೋಡಿದಾಗ ಗೊತ್ತಾಗುತ್ತದೆ.

ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನಾ ಗೌಡ, ಯಶ್ ಶೆಟ್ಟಿ, ಸುಧಿ, ಗೋವಿಂದೇಗೌಡ ನಟಿಸಿದ್ದಾರೆ. ಸಿನಿಮಾವನ್ನು ಸೂರ ನಿರ್ದೇಶನ, ರಘು ಸಿಂಘಂ ನಿರ್ಮಾಣ ಮಾಡಿದ್ದಾರೆ. ಸಂಗೀತ ಶಶಾಂತ್ ಶೇಷಗಿರಿ, ಸಂದೀಪ್ ವಲ್ಲುರಿ ಸಿನಿಮಾಟೊಗ್ರಫಿ, ಸಂಕಲನ ಉಮೇಶ್ ಆರ್‌ಬಿ ಮಾಡಿದ್ದಾರೆ.

ರೊಮ್ಯಾಂಟಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಗರ ಕಿಟ್ಟಿ ಈ ಬಾರಿ ಕಥೆಯ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಆಕ್ಷನ್ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮಾರುದ್ದ ಗಡ್ಡ ಬಿಟ್ಟು ಭಯ ಹುಟ್ಟಿಸುವ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀನಗರ ಕಿಟ್ಟಿ 2017 ರಲ್ಲಿ ಬಿಡುಗಡೆ ಆಗಿದ್ದ ‘ಸಿಲಿಕಾನ್ ಸಿಟಿ’ ಸಿನಿಮಾದ ಬಳಿಕ ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ ಈಗ ‘ಗೌಳಿ’ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!