ಡೀಪ್​ಫೇಕ್ ವಿವಾದ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್‌ ಜಾರಿ

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್​​ ಆದ ಬಳಿಕ ನಕಲಿ ವಿಷಯಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಿಗೆ  ಸಮನ್ಸ್‌ ಜಾರಿ ಮಾಡಿದ್ದು ಈ ಬಗ್ಗೆ ಸಭೆ ಕರೆದಿದೆ.

ಕೆಲವು ದಿನಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಅವರ ಎಐ ಜನರೇಟೆಡ್​ ವಿಡಿಯೋವೊಂದು ವೈರಲ್​ ಆಗಿತ್ತು. ಖ್ಯಾತನಾಮರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರವೂ ಭರವಸೆ ನೀಡಿತ್ತು.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ , ಯೂಟ್ಯೂಬ್‌ಗೆ ಸಭೆಗೆ ಹಾಜರಾಗಲು ಮನ್ಸ್‌ ಜಾರಿ ಮಾಡಿದ್ದು ಈ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ವಿನಂತಿಸಲಾಗಿದೆ.

ಸಾಮಾಜಿಕ ಜಾಲತಾಣ ಬಳಕೆ ನಿಯಮಗಳು, ಗೌಪ್ಯತೆ ನೀತಿಗಳು, ಬಳಕೆದಾರ ಒಪ್ಪಂದಗಳು ಮತ್ತು ಯಾರನ್ನೋ ತಪ್ಪಾಗಿ ಪ್ರಸ್ತಾಪ ಮಾಡದಂತೆ ಬಳಕೆದಾರರಿಗೆ ತಿಳಿಸುವುದೂ ಸೇರಿದಂತೆ ಸೂಕ್ತ ನಿಯಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆ ವಹಿಸುವಂತೆ ಸರ್ಕಾರ ಸಾಮಾಜಿಕ ಮಾಧ್ಯಮಗಳಲ್ಲಿ ವಿನಂತಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ಮುಂದಿನ ವರ್ಷಗಳ ರಾಷ್ಟ್ರೀಯ ಚುನಾವಣೆಗಳನ್ನು ಗಮನದಲ್ಲಿರಿಸಿ, ಡೀಪ್‌ಫೇಕ್‌ ಕಂಟೆಂಟ್​ಗಳು ಉಲ್ಬಣಗೊಳ್ಳುವುದರ ಪರಿಣಾಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಐಟಿ ಕಾಯ್ದೆ 2000ರ ಸೆಕ್ಷನ್ 66D ಪ್ರಕಾರ ಕಂಪ್ಯೂಟರ್ ಬಳಸುವ ಮೂಲಕ ತಪ್ಪು ಮಾಡುವ ವ್ಯಕ್ತಿಗಳಿಗೆ 3 ವರ್ಷಗಳವರೆಗೆ ಸಂಭಾವ್ಯ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ಹಾಕಲು ಅವಕಾಶ ಇದೆ.

ರಶ್ಮಿಕಾ ಅವರ ಪ್ರಕರಣದ ಬಳಿಕ ಡೀಪ್ ಫೇಕ್ ಮೂಲಕ ಬಾಲಿವುಡ್ ಹಿರಿಯ ನಟಿ ಕಾಜೋಲ್ ಅವರು ಬಟ್ಟೆ ಬದಲಿಸುವ ವಿಡಿಯೋ ವೈರಲ್ ಆಗಿತ್ತು.

ಡೀಪ್ ಫೇಕ್ ಪ್ರಕರಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!