ಪುನೀತ್ ರಾಜ್ಕುಮಾರ್ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಯಾವುದೇ ಸರ್ಕಾರಿ ಜಾಹೀರಾತಿಗೆ ನಯಾಪೈಸೆ ಹಣ ಪಡೆಯಲಿಲ್ಲ ಎನ್ನುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.
ನಂದಿನಿಯ ಹಲವು ಜಾಹೀರಾತುಗಳಲ್ಲಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡರೂ ಅದಕ್ಕೆ ಅವರು ಹಣ ಪಡೆಯಲಿಲ್ಲ. ರಾಜ್ಕುಮಾರ್ ಅವರು ಕೂಡಾ ನಂದಿನಿ ಜಾಹೀರಾತಿನಲ್ಲಿ ಉಚಿತವಾಗಿ ಕಾಣಿಸಿಕೊಂಡಿದ್ದರು.
ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಮಂತ್ರಿಗಳಾಗಿದ್ದಾಗ ಸಂಭಾವನೆ ಪಡೆಯದೆ ಆರ್ಟಿಇ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಪ್ರಚಾರ ನೀಡಿದ್ದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಬ್ಸಿಡಿ ದರದಲ್ಲಿ ಎಲ್ಇಡಿ ಬಲ್ಬ್ ವಿತರಣೆ ಯೋಜನೆಗೆ ಪುನೀತ್ ರಾಯಭಾರಿ ಆಗಿ ಕಾಣಿಸಿಕೊಂಡಿದ್ದರು.
ಚಾಮರಾಜ ನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪುನೀತ್ ರಾಯಭಾರಿಯಾಗಿದ್ದರು. ಈ ಕೆಲಸವನ್ನು ಅವರು ಉಚಿತವಾಗಿ ಮಾಡಿದ್ದರು.
ರಾಜಕೀಯದಿಂದ ದೂರ ಇದ್ದ ಪುನೀತ್ ಚುನಾವಣೆ ವೇಳೆ ಚುನಾವಣಾ ಆಯೋಗದ ಜೊತೆಗೂಡಿ ಮತದಾನ ಜಾಗೃತಿ ಅಭಿಯಾನದಲ್ಲಿ ಕೂಡಾ ಕೈಜೋಡಿಸಿದ್ದರು.
ಕೌಶಲ್ಯ ಕರ್ನಾಟಕ ಯೋಜನೆಯ ರಾಯಭಾರಿ ಆಗಿದ್ದ ಪುನೀತ್, ಬಿಎಂಟಿಸಿ ಬಸ್ ಆದ್ಯತಾ ಪಥ ಕಾರ್ಯಕ್ರಮಕ್ಕೂ ರಾಯಭಾರಿ ಆಗಿದ್ದರು.
ಸಮಾಜಮುಖಿ ಆಗಿದ್ದ ಪುನೀತ್ ನಿಧನಕ್ಕೆ ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಅನೇಕ ಸಂಘ – ಸಂಸ್ಥೆಗಳು ಅಶ್ರುತರ್ಪಣ ಸಲ್ಲಿಸಿವೆ.
Be the first to comment