ಗೋರಿ ಚಿತ್ರದ ಧ್ವನಿಸುರುಳಿ ಬಿಡುಗಡೆ

ಗೋರಿ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು ,ವಿನು ಮನಸು ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಲಿರಿಕರ್ ಹಾಡುಗಳನ್ನು ಪ್ರಕಾಶ್ ಜವಳಿ, ಲಕ್ಷ್ಮಣ್ ಹಾವನೂರ ಹಾಗೂ ಸೋಮಣ್ಣ ಜಗ್ಗಿನ ಅನಾವರಣಗೊಳಿಸಿದರು. ಗೋಪಾಲಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಉತ್ತರ ಕರ್ನಾಟಕದ ಹಾವೇರಿಯ ಗೆಳೆಯರೆಲ್ಲ ಕೂಡಿಗೊಂಡು ಹಾವೇರಿ ಟಾಕೀಸ್ ಕ್ರಿಯೇಷನ್ಸ್‍ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕಿರುತೆರೆ ವಾಹಿನಿಯಲ್ಲಿ ವರದಿಗಾರನಾಗಿರುವ ಕಿರಣ್ ನಾಯಕನಾಗಿ, ಸ್ಮಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿ, ನನ್ನ ಸ್ನೇಹಿತ ಕೃಷ್ಣನನ್ನು ನಾಯಕನಾಗಿಸಬೇಕೆಂಬ ನನ್ನ ಕನಸು ಈ ಚಿತ್ರದ ಮೂಲಕ ಈಡೇರಿದ್ದು, ನನ್ನ ಪ್ರಯತ್ನಕ್ಕೆ ಹಾವೇರಿಯ ಗೆಳೆಯರು ಇಂಬು ನೀಡಿದರು. ಸ್ನೇಹ ಮತ್ತು ಪ್ರೀತಿಯ ಕುರಿತಾಗಿ ಮಾಡಿರುವ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು.ಮತ್ತೊಬ್ಬ ಪತ್ರಕರ್ತ ಜಗ್ಗಿನ್ ಅವರ ತಂದೆ ಎಚ್.ಡಿ.ಜಗ್ಗಿನ್ ಮಾತನಾಡಿ, ಕಲಾರಂಗದಲ್ಲಿ ಕಲಾದೇವಿಯ ಸೇವೆ ಮಾಡಬೇಕೆಂಬ ಕನಸು ನನಗೆ ಮೊದಲಿನಿಂದಲೂ ಇತ್ತು, ಅದು ಈ ಚಿತ್ರದ ಶಿಕ್ಷಕನ ಪಾತ್ರ ಮಾಡುವ ಮೂಲಕ ಈಡೇರಿದೆ.ಪರಮೇಶಪ್ಪ ಪೂಜಾರ್ ಅವರ ಸಹಕಾರ ಈ ಚಿತ್ರಕ್ಕೆ ತುಂಬಾ ಇದೆ. ಚಿತ್ರತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.

ನಾಯಕ ಕಿರಣ್ ಮಾತನಾಡಿ, ಇಬ್ಬರು ಸ್ನೇಹಿತರು ಹಾಗೂ ಒಂದು ಗೋರಿಯ ಸುತ್ತ ನಡೆದ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೆವು, ಸ್ನೇಹಿತರು ಹಾಗೂ ಊರವರೆಲ್ಲರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.ಮಂಜುನಾಥ ಹೆಗ್ಡೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹಾವೇರಿಯ ಸುತತಿಮುತ್ತ35 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಒಂದು ಹಾಡಿನ ಚಿತ್ರಣ ಮಾತ್ರಬಾಕಿ ಇದೆ.

ಶ್ರೇಯಾ ಅಂಜುಶ್ರೀ ಈ ಚಿತ್ರದ ಒಂದು ಹಾಡಿನಲ್ಲಿ ಅಭಿನಯಿಸಿದ್ದಾರೆ. ಜಗ್ಗಿನ 2 ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಹೊರಟಿರುವ ನಟ ಕಿರಣ್ ಅವರಿಗೆ ಮತ್ತಷ್ಟು ಅವಕಾಶಗಳು ದೊರೆಯುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!