ಕಳೆದ ಸಂಚಿಕೆಯಲ್ಲಿ ಗೋಪಿ ಕೆರೂರ್ ಅವರ ಬದುಕಿನ ಒಂದಷ್ಟು ಮಜಲುಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೆವು…. ಇದು ಅದರ ಮುಂದುವರಿದ ಭಾಗ.
1999ರಲ್ಲೇ ಪ್ರೇಮವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಗೋಪಿಯವರಿಗೆ, ರವಿ ಮತ್ತು ಕುಸುಮ ಹೆಸರಿನ ಎರಡು ಮಕ್ಕಳು. ರವಿ ಎಂಬ ಹೆಸರಿನ ಹಿಂದೆ ರವಿಬೆಳೆಗೆರೆಯವರ ನೆರೆಳಿದೆ. ಹೇಗೆಂದರೆ…. ಅವರ ಜೊತೆ ಇದ್ದಾಗಿನ ದಿನಗಳಲ್ಲಿ ‘ಬಾಸ್.. ನನ್ಗೇನಾದ್ರೂ ಗಂಡು ಮಗುವಾದ್ರೆ.. ನಿಮ್ದೇ ಹೆಸ್ರಿಡ್ತೀನಿ..’’ ಅಂದಿದ್ರಂತೆ. ಅಂದಿನ ಮಾತಿನಂತೆಯೇ ನಡೆದು ಕೊಂಡ ಗೋಪಿಯವರಿಗೆ, ಮುಂದೆ ಸಂಸಾರಕ್ಕಾಗಿ ಸಿನಿಮಾವನ್ನು ಬಿಡವೇಕಾಯಿತು. ಮಕ್ಕಳ ವಿದ್ಯಾಭ್ಯಾಸ, ಸಂಸಾರವನ್ನು ಸಾಕುವ ಸಲುವಾಗಿ ಸುಮಾರು ಎಂಟು ವರ್ಷಗಳ ಟ್ರಾವೆಲ್ಸ್ಗಳಲ್ಲಿ ಡ್ರೈವರ್ ಆಗಿ ಕೆಲಸ ಮಾಡಿದ್ರು
ಈ ಸಂದರ್ಭದಲ್ಲಿ ತನ್ನ ಕನಸ್ಸನ್ನು ನನಸು ಮಾಡಲು ಹಗಲೂ-ಇರುಳು ಚಿಂತಿಸುತ್ತಿದ್ದ ಗೋಪಿಯವರ ಅಮ್ಮ . ಆ ಮಹಾತಾಯಿ ಎಂತಹ ಆಶಾದಾಯಕ ಮನಸ್ಥಿಯವಳು ಅಂದರೆ.. ಸಾಯೋಕೂ ಮುಂಚೆ.. ”ನನ್ನ ಮಗ ನಿರ್ದೇಶಕ ಆಗೇ ಆಗುತ್ತಾನೆ.. ನನ್ನ ಬಿಟ್ಟರೆ ಅವನಿಗಿರುವುದು ನೀನೋಬ್ಬಳೇ.. ಅವನ ಕನಸ್ಸನ್ನು ನನಸು ಮಾಡಲು ನೀನು ಸಹಾಯ ಮಾಡಬೇಕು’’ ಎಂದು ಗೋಪಿಯವರ ಶ್ರೀಮತಿಯಲ್ಲಿ ಹೇಳಿದ್ದರಂತೆ.
ಇದಾದ ಮೇಲೆ 2013ರಲ್ಲಿ ‘ಮುನ್ನಡೆ’ ಅನ್ನುವ ಶಾರ್ಟ್ಫಿಲ್ಮ್ ನಿರ್ದೇಶನ ಮಾಡಿದ ಇವರು, ಮುಂಗಾರು ಮಳೆ-2 ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. ಜೊತೆ ಜೊತೆಗೆ ನಿರ್ಮಾಪಕರ ತಲಾಶ್ಗೂ ಇಳಿದಿದ್ದ ಗೋಪಿಯವರು, ಜೀವನೋಪಾಯಕ್ಕಾಗಿ ರಾಗಿಗಂಜಿ ಮಾರಾಟ ಮಾಡಲು ಆರಂಭಿಸಿದರು.
ಬೆಳಿಗ್ಗೆ 6ರಿಂದ-10ರವರೆಗೆ ರಾಗಿಗಂಜಿ ಬಿಸಿನೆಸ್ ಮಾಡಿ, ಹಗಲಿಡೀ ನಿರ್ಮಾಪಕರನ್ನು ಹುಡುಕುವುದು ಮತ್ತು ಚಿತ್ರಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲು ಆರಂಭಿಸಿದರು. ಬದುಕು ಹೀಗೆ ಸಾಗುತ್ತಿರುವಾಗ ಗೋಪಿಯವರ ರಾಗಿಗಂಜಿಯ ಖಾಯಂ ಗಿರಾಕಿಯಾಗಿದ್ದ ಬೈಸಾನಿ ಸತೀಶ್ ಕುಮಾರ್ ಅವರು ಚಿತ್ರದ ಕಥೆ ಕೇಳಿ ಚಿತ್ರಕ್ಕೆ ಬಂಡವಾಳ ಹೂಡುತ್ತಾರೆ. ಆ ಚಿತ್ರವೇ ‘ರಂಕಲ್ರಾಟೆ’.
2018ರಲ್ಲಿ ಕರ್ನಾಟಕ ರಾಜ್ಯದ್ಯಾಂತ ಸುಮಾರು ಎಂಭತ್ತು ಥೀಯಟರ್ನಲ್ಲಿ ರಿಲೀಸ್ ಆದ ಚಿತ್ರ ಮೂರು ವಾರಗಳ ಕಾಲ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಪಲವಾಯ್ತು. ರಂಕಲ್ರಾಟೆಯ ಸಕ್ಸಸ್ ಅನ್ನು ನೋಡಿದ ಗೋಪಿಯವರ ಸ್ನೇಹಿತ, ಶಿವರಾಜ್ ಲಕ್ಷ್ಮಣ್ರಾವ್ ದೇಸಾಯಿ ಅನ್ನುವವರು ಇವರ ಎರಡನೇ ಚಿತ್ರ ‘ಮದುವೆ ಮಾಡ್ರೀ ಸರಿಹೋಗ್ತಾನೆ’ ಅನ್ನುವ ಚಿತ್ರಕ್ಕೆ ಬಂಡವಾಳ ಹೂಡುತ್ತಾರೆ. ಆ ಚಿತ್ರ ಮಾಚ ಮೊದಲನೇಯ ವಾರದಲ್ಲಿ ರಿಲೀಸ್ ಆಗಲಿದೆ. ಸಂಪೂರ್ಣ ಉತ್ತರ ಕರ್ನಾಟಕದ ಬ್ಯಾಕ್ ಡ್ರಾಪ್ನಲ್ಲಿ ಚಿತ್ರೀಕರಿಸಲಾದ ಈ ಚಿತ್ರ ತನ್ನ ಹಾಡುಗಳಿಂದ ಈಗಾಗಲೇ ಸಾಕಷ್ಟು ಹೈಪ್ ಕ್ರೀಯೇಟ್ ಮಾಡಿದೆ.
ಕೆರೂರು ಅನ್ನುವ ಸಣ್ಣ ಗ್ರಾಮದಿಂದ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬಂದು ಅಮ್ಮನ ಆಸೆಯಂತೆ ನಿರ್ದೇಶಕನಾಗಿ ನೆಲೆನಿಂತ ಗೋಪಿಯವರಿಗೆ ಇಂದಿಗೂ ಅಮ್ಮನ ನೆನಪು ಕಾಡುತ್ತದೆ. ಅಮ್ಮನಿಂದ…ಅಮ್ಮನಿಗಾಗಿ…. ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಈ ಪ್ರತಿಭಾವಂತ ಸಿನಿಮಾ ಆರಾಧಕ ಮುಂದೊಂದು ದಿನ ಬಹುಬೇಡಿಕೆಯ ನಿರ್ದೇಶಕನಾಗುವುದರಲ್ಲಿ ಸಂಶಯವಿಲ್ಲ.
Be the first to comment