ಥ್ರಿಭಲ್-ಜಿ! ಗುಡ್ ಗುಡ್ಡರ್ ಗುಡ್ಡೆಸ್ಟ್ ಡಿಫೆರೆಂಟ್ ಟೈಟಲ್‌ನ, ಡಿಫೆರೆಂಟ್ ಕಥೆ!

ಕೊರೊನಾ ಸಮಸ್ಯೆಯಿಂದಾಗಿ ಸ್ತಬ್ಧವಾಗಿದ್ದ ಚಿತ್ರರಂಗ ನಿಧಾನವಾಗಿ ಉಸಿರಾಡಲು ಆರಂಭಿಸಿದೆ. ಸ್ಟಾರ್ ನಟರ ಜೊತೆ ಸಾಕಷ್ಟು ಹೊಸಬರ ಚಿತ್ರಗಳು ಕಂಟೆಂಟ್ ಮೂಲಕ ಜನರನ್ನು ತಲುಪುವ ಪ್ರಾಮಾಣಿಕ ಪ್ರಯತ್ನಕ್ಕೆ ಕೈ ಹಾಕಿದೆ. ಈ ಸಾಲಿಗೆ ಸಂದೀಪ್ ಬಿ.ಹೆಚ್. ನಿರ್ದೇಶನದ “ಗುಡ್ ಗುಡ್ಡರ್ ಗುಡ್ಡೆಸ್ಟ್” ಸಿನಿಮಾವೂ ಒಂದು. ಈ ಚಿತ್ರದ ಶೀರ್ಷಿಕೆಯನ್ನು ನವೆಂಬರ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಅನಾವರಣಗೊಳಿಸಿ, ಶುಭ ಹಾರೈಸಲಿದ್ದಾರೆ.

ಇಂಗ್ಲೀಷ್ ಟೈಟಲ್ ಮೂಲಕ ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳು ಸದ್ದು ಮಾಡಿವೆ. “ಗುಡ್ ಗುಡ್ಡರ್ ಗುಡ್ಡೆಸ್ಟ್”(ಜಿ.ಜಿ.ಜಿ – ಥ್ರಿಬಲ್ ಜಿ) ಡಿಫೆರೆಂಟ್ ಆಗಿರೋದು ಮಾತ್ರವಲ್ಲದೆ ಚಿತ್ರದ ಪೂರವಾಗಿದೆ ಅನ್ನೋದು ನಿರ್ದೇಶಕರ ಮಾತು. ಗ್ರಾಮೀಣ ಭಾಗದಲ್ಲಿ ಇಂಗ್ಲೀಷ್ ಗ್ರಾಮರ್ ಅರಿಯದ ಯುವಪೀಳಿಗೆಯ ನಾನ್‌ ಸ್ಟಾಪ್ ಕಾಮಿಡಿಯ ಕಥೆ ಬಿಚ್ಚಿಡಲಿದೆ ಚಿತ್ರ. ಇಲ್ಲಿ ಸಂದೀಪ್ ಗ್ರಾಮರ್ ಎಡವಡ್ಡು ಮತ್ತು ಯುವಪೀಳಿಗೆಯ ಗ್ಲಾಮರ್‌ನ ಹುಚ್ಚು, ಎರಡನ್ನೂ ಸೇರಿಸಿ ಚಿತ್ರಕಥೆ ಹೆಣೆದಿದ್ದಾರೆ. ಗ್ರಾಮರ್ ಬರದ ಯೂತ್ಸ್, ತಮ್ಮ ಜೀವನದಲ್ಲಿ ಗ್ಲಾಮರ್ ಎಂಟ್ರಿ ಕೊಟ್ಟಾಗ ಆಗುವ ಫನ್ನೀ ಇನ್ಸಿಡೆಂಟ್‌ಗಳೇ ಚಿತ್ರದ ಜೀವಾಳ. ಒಟ್ಟಿನಲ್ಲಿ ‘ಥ್ರಿಬಲ್-ಜಿ’ ಕನ್ನಡಕ್ಕೊಂದು ನಕತ್ ಮನೋರಂಜನೆಯನ್ನು ನೀಡುವ ಚಿತ್ರವಾಗುವ ಎಲ್ಲಾ ಸಾಧ್ಯತೆಯನ್ನು ತನ್ನ ಟೈಟಲ್ ಮತ್ತು ಒನ್‌ಲೈನ್ ಕಥೆ ಮೂಲಕ ತೆರೆದಿಟ್ಟಿದೆ.

‘ಥ್ರಿಬಲ್-ಜಿ’ ಸಂದೀಪ್ ಅವರ ಚೊಚ್ಚಲ ಪ್ರಯತ್ನ. ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದ ಹಲವು ಮಜಲುಗಳಲ್ಲಿ ಕೆಲಸ ಮಾಡಿದ್ದ ಇವರ ನಿರ್ದೇಶಕನಾಗುವ ಕನಸನ್ನು ಸಕಾರಗೊಳಿಸಿತ್ತಿರುವವರ ನಿರ್ಮಾಪಕರಾದ ಸುರೇಶ ಬಿ. ಅವರಿಗೂ ಇದು ಮೊದಲ ಪ್ರಯತ್ನ. ತಮ್ಮ ಚೊಚ್ಚಲ ಕಥೆಯನ್ನು ಡಾರ್ಕ್ ಹ್ಯೂಮರ್ ಸೆಟೈರ್ ಕಾಮಿಡಿ ಜಾನರ್‌ನಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನದಲ್ಲಿದ್ದಾರೆ ಸಂದೀಪ್. ಇದರೊಂದಿಗೆ ರೊಮ್ಯಾನ್ಸ್, ಥ್ರಿಲ್ಲರ್, ಡ್ರಾಮಾ, ಕ್ರೈಮ್, ಸ್ಟಂಟ್ಸ್ ಸೇರಿದಂತೆ ಇತ್ಯಾದಿ ಅಂಶಗಳೂ ಸೇರಿವೆ. ಒಟ್ಟಿನಲ್ಲಿ ಇದು ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನವಾಗುವ ಸಾಧ್ಯತೆಯಿದೆ.

ಚಿತ್ರಕಥೆಯೇ ಚಿತ್ರದ ಜೀವಾಳ. ಇಂತಹ ಡಿಫೆರೆಂಟ್ ಚಿತ್ರಕಥೆಯನ್ನು ಸಂದೀಪ್ ಆರು ನಟಿಯರ ಮೂಲಕ ಹೇಳಲಿದ್ದಾರೆ. ಈ ಆರು ಪ್ರಮುಖ ನಟಿಯರ ಜೊತೆಗೆ ಎಂಭತ್ತಕ್ಕೂ ಹೆಚ್ಚು ನುರಿತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇಲ್ಲಿ ಪ್ರತಿಯೊಂದು ಪಾತ್ರಗಳಿಗೂ ತನ್ನದೇ ಆದಂತಹ ವಿಶೇಷತೆಗಳಿವೆ. ವಿಶೇಷವೆಂದರೆ, ಸಂದೀಪ್ ತಮ್ಮ ಚೊಚ್ಚಲ ಚಿತ್ರದಲ್ಲೇ ಸಾಲಷ್ಟು ಹಿರಿಯ ರಂಗಕಲಾವಿದರನ್ನು ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರಿಗೆ ಪರಿಚಿಯುಸುವ ಪ್ರಯತ್ನ ಮಾಡಲಿದ್ದಾರೆ. ಸಹಜವಾಗಿಯೇ ಇಂತಹ ಡಿಫೆರೆಂಟ್ ಚಿತ್ರದ ನಾಯಕ-ನಾಯಕಿಯರು ಯಾರು ಅನ್ನುವುದು ಕುತುಹೂಲ ಮೂಡುವುದು ಸಹಜ. ಆದರೆ, ಚಿತ್ರ ತಂಡ ಇನ್ನೂ ನಾಯಕ-ನಾಯಕಿಯ ಆಯ್ಕೆ ಪ್ರಕ್ರಿಯೆಯಲ್ಲಿದೇ. ಈ ಪ್ರಕ್ರಿಯೇ ಮುಗಿದ ಕೊಡಲೇ ಚಿತ್ರತಂಡ ಶೂಟಿಂಗ್ ಶುರುಮಾಡಲಿದೆ. ಗುಡ್ ಗುಡ್ಡರ್ ಗುಡ್ಡೆಸ್ಟ್…! ಟೈಟಲ್ ಹೇಳುವಂತೆಯೇ, ನಿರ್ದೇಶಕರಿಗೆ, ನಿರ್ಮಾಪಕರಿಗೆ.. ಇಡೀ ತಂಡಕ್ಕೆ ‘ಬಿಸಿನಿಮಾಸ್’ ಗುಡ್‌ಲಕ್ ಬಯಸುತ್ತದೆ.

ನಿರ್ದೇಶಕ :ಸಂದೀಪ್ ಬಿ.ಹೆಚ್

ನಿರ್ಮಾಪಕ ಸುರೇಶ್ .ಬಿ

This Article Has 2 Comments
  1. Pingback: DevOps

  2. Pingback: 로켓툰

Leave a Reply

Your email address will not be published. Required fields are marked *

Translate »
error: Content is protected !!