ನಿರೀಕ್ಷೆ ಮೂಡಿಸಿದ ‘ಬನಾರಸ್​’

‘ಬನಾರಸ್​’ ಚಿತ್ರದ ಟ್ರೈಲರ್ ಒಂದೇ ದಿನದಲ್ಲಿ ಎಲ್ಲ ಭಾಷೆಯ ವರ್ಷನ್​ಗಳಿಂದ ಒಟ್ಟು 40 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದು ಗಮನ ಸೆಳೆದಿದೆ.

ಟ್ರೇಲರ್​ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟೈಮ್ ಟ್ರಾವೆಲಿಂಗ್​ ಪರಿಕಲ್ಪನೆಯನ್ನು ಇಟ್ಟುಕೊಂಡು ‘ಬನಾರಸ್​’ ಸಿನಿಮಾ ಮಾಡಲಾಗಿದೆ. ಝೈದ್​ ಖಾನ್​ ನಟನೆಯ ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ನಾಯಕಿಯಾಗಿ ಸೋನಲ್​ ಮಾಂಥೆರೋ ನಟಿಸಿದ್ದಾರೆ.

ಈ ಮೊದಲು ಬಿಡುಗಡೆ ಆಗಿದ್ದ ‘ಮಾಯಗಂಗೆ..’ ಸಾಂಗ್​ ಕೂಡ ಜನಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ನಿರ್ದೇಶಕ ಜಯತೀರ್ಥ ಅವರು ಈ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಬನಾರಸ್​’ ಚಿತ್ರ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್​ ರಿಲೀಸ್ ಮಾಡಲಾಗಿದೆ.

ಅಜನೀಶ್​ ಬಿ. ಲೋಕನಾಥ್​ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದ್ವೈತ್​ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ತಿಲಕ್​ ರಾಜ್​ ಬಲ್ಲಾಳ್​ ಅವರು ಬಂಡವಾಳ ಹೂಡಿದ್ದಾರೆ. ನವೆಂಬರ್​ 4ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!