ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್ ಮ್ಯಾನರ್ಸ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ.
ದುನಿಯಾ, ಟಗರು, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಗಳ ಖ್ಯಾತಿಯ ಸೂರಿ ಅವರ ಮುಂಬರುವ ಈ ಚಿತ್ರ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶೇಖರ್ ಎಸ್ ಅವರ ಛಾಯಾಗ್ರಹಣವಿದೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಕೆಲವು ಪ್ಯಾಚ್ವರ್ಕ್ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿದೆ. ಇಂಟ್ರೋ ಟ್ರ್ಯಾಕ್ ನ್ನು ಧನು ಕೊರಿಯೋಗ್ರಫಿ ಮಾಡಲಿದ್ದು, ಅಕ್ಟೋಬರ್ 10 ರಿಂದ ಚಿತ್ರೀಕರಣ ನಡೆಯಲಿದೆ.
ಅಭಿಷೇಕ್ ನಿರ್ದೇಶಕ ಕೃಷ್ಣ ಅವರ ಮುಂಬರುವ ಚಿತ್ರದಲ್ಲಿ ನಟಿಸಲಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣವನ್ನು ಪ್ರಾರಂಭ ಆಗಲಿದೆ. ನಿರ್ದೇಶಕ ಮಹೇಶ್ ಕುಮಾರ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರೊಂದಿಗೆ ತಾತ್ಕಾಲಿಕವಾಗಿ AA04 ಎಂದು ಹೆಸರಿಸಲಾದ ಚಿತ್ರದಲ್ಲೂ ಅಭಿಷೇಕ್ ನಟಿಸುತ್ತಿದ್ದಾರೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
___

Be the first to comment