ಸಿಹಿ ಸುದ್ದಿ ಹಂಚಿಕೊಂಡ ಡಾಲಿ

ಕನ್ನಡ ಚಿತ್ರರಂಗದ ಜನಪ್ರಿಯ ನಟ  ಡಾಲಿ ಧನಂಜಯ್ ತಾವು ತಂದೆಯಾಗುತ್ತಿರುವ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮವೊಂದರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಡಾಲಿ ತಾವು ತಂದೆಯಾಗುತ್ತಿರುವುದನ್ನು ಖಚಿತಪಡಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಡಾಲಿ ಧನಂಜಯ್ ಮತ್ತು ಧನ್ಯತಾ ಕಳೆದ ವರ್ಷ ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಈ ಜೋಡಿ ಮಗುವನ್ನು ಸ್ವಾಗತಿಸಲು ಸಿದ್ಧವಾಗಿದೆ.

ಡಾಲಿ ಧನಂಜಯ್  ಅವರ ಹಲವು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಪ್ರ ಅವರು ‘ಹಲಗಲಿ’, ‘666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್’, ‘ಜಿಂಗೊ’, ‘ಅಣ್ಣ ಫ್ರಂ ಮೆಕ್ಸಿಕೊ’, ‘ಉತ್ತರಕಾಂಡ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.   ‘ಹೆಗ್ಗಣ ಮುದ್ದು’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!