“ಗುಡ್ ಗುಡ್ಡರ್ ಗುಡ್ಡೆಸ್ಟ್” ಟೈಟಲ್‍ ಟೀಸರ್ ಲಾಂಚ್ ಮಾಡಿದ ಸಂಸದ ತೇಜಸ್ವಿ ಸೂರ್ಯ

ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸಬರು ಎಂಟ್ರಿಯಾಗುತ್ತಿದ್ದಾರೆ. ಪಕ್ಕಾ ತಯಾರಿಯೊಂದಿಗೆ ಒಂದಷ್ಟು ಪ್ರಯೋಗದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಈಗ ಗುರುತಿಸಿಕೊಳ್ಳಲು ಬರುತ್ತಿರೋ ಹೊಸ ನಿರ್ದೇಶಕ ಯುವಧೀರ. ಹೌದು ಈ ಯುವಧೀರ ಅವರಿಗೆ ಸಿನಿಮಾ ಹೊಸದಲ್ಲ.

ಕಳೆದ ಒಂದುವರೆ ದಶಕದಿಂದಲೂ ಸಿನಿಮಾರಂಗದಲ್ಲಿ ಹಲವಾರು ಸಿನಿಮಾಗಳಿಗೆ ಸಂಭಾಷಣೆಕಾರನಾಗಿ, ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಕಾಮಿಡಿ ಕಿಲಾಡಿ, ಡ್ರಾಮ ಜ್ಯೂನಿಯರ್ಸ್, ಕಲರ್ಸ್‍ನಲ್ಲಿ ಮೂಡಿ ಬರುತ್ತಿರುವ ಮಜಾಭಾರತ ಇನ್ನು ಹಲವು ಶೋಗಳಿಗೆ ಇವರೇ ಬರಹಗಾರರು. ಈಗ ವಿಷಯ ಏನೆಂದರೆ ಸಿನಿಮಾದ ಟೈಟಲ್‍ನ ನಾಮಕರಣ ಹೀಗೂ ಮಾಡ್ಬಹುದು ಎಂದು ಸಿನಿಮಾ ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಹೌದು ಪ್ರಥಮ ಬಾರಿಗೆ ಟೈಟಲ್‍ಗೆ ಅಂತಾನೆ ಒಂದು ಟೀಸರನ್ನ ಮಾಡಿದ್ದಾರೆ.

ಟೈಟಲ್‍ಗೆ ಟೀಸರ್ ಮಾಡುವ ಪ್ರಯೋಗ ಕನ್ನಡದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನ. ಸಾಮಾನ್ಯವಾಗಿ ಒಂದು ಮಗೂಗೆ ಹೆಸರಿಡಬೇಕಾದ್ರೆ ಜೋಹಿಸರತ್ತಿರ ಹೋಗಿ ಜಾತಕ ತೋರಿಸಿ ಹೆಸ್ರು ಬಲ ಕೇಳಿಕೊಂಡು ಅದರ ಆಧಾರದಲ್ಲಿ ಹೆಸರಿಟ್ಟು ನಾಮಕರಣ ಮಾಡುವ ಪ್ರಕ್ರಿಯೆ ಗೊತ್ತೆ ಇದೆ. ಅದೇ ಒಬ್ಬ ಸಿನಿಮಾ ನಿರ್ದೇಶಕನ ದೃಷ್ಠಿಕೋನದಲ್ಲಿ, ತನಗೆ ಮಗು ಎಂದರೆ ತನ್ನ ಸಿನಿಮಾವೇ ಎಂದು ತಿಳಿದಿರುತ್ತಾನೆ.

ಈ ಕಾನ್ಸೆಪ್ಟನ್ನೇ ಅಳವಡಿಸಿಕೊಂಡು ‘ಗುಡ್ ಗುಡ್ಡರ್ ಗುಡ್ಡೆಸ್ಟ್ ಸಿನಿಮಾದ ನಿರ್ದೇಶಕ ಯುವಧೀರ, ವಿಡಂಬನೆಯೊಂದಿಗೆ ಕಾಮಿಡಿಯಾದ ಅಧ್ಬುತವಾದ7 ಟೀಸರೊಂದನ್ನು ತನ್ನ ಸಿನಿಮಾದ ಟೈಟಲ್ ನಾಮಕರಣಕ್ಕೆ ಮಾಡಿ, ಸಿನಿಮಾ ಟೈಟಲ್‍ನ ಬಿಡುಗಡೆಗೆ ಈ ರೀತಿನೂ ವಿಶೇಷವಾಗಿ ಟೀಸರ್‍ವೊಂದನ್ನು ಬಿಡಬಹುದಾ ಎಂದು ತೋರಿಸಿಕೊಟ್ಟಿದ್ದಾರೆ.

ಸಧ್ಯ ಈ ಟೀಸರ್ ಯೂಟ್ಯೂಬ್‍ನಲ್ಲಿ ಟ್ರೆಂಡಿಗ್‍ನಲ್ಲಿರುವುದೇ ಇವರ ವಿಭಿನ್ನತೆಗೆ ಸಾಕ್ಷಿಯಾಗಿದೆ. ಈ ಟೀಸರನ ಜೊತೆಗೆ ಸಿನಿಮಾದ ಟೈಟಲ್‍ನ ಫಸ್ಟ್‍ಲುಕ್ ಪೋಸ್ಟರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರು ಆದ ತೇಜಸ್ವಿ ಸೂರ್ಯರವರು ಬಿಡುಗಡೆ ಮಾಡಿದ್ದಾರೆ. ಇನ್ನೂ ಶೀರ್ಷಿಕೆ ವಿಚಾರಕ್ಕೆ ಬಂದರೆ ಇಂಗ್ಲಿಷ್ ನ ವ್ಯಾಕರಣದಲ್ಲಿ ಡಿಗ್ರೀಸ್ ಆಫ್ ಕಂಪೇರಿಷನ್ ಅಂದರೆ ಪಾಸಿಟೀವ್, ಕಂಪೇರಿಟಿವ್, ಹಾಗು ಸೂಪರ್‍ಲೇಟಿವ್ ಎಂಬ ಮೂರು ಡಿಗ್ರಿಗಳಿವೆ. ಅದರ ನಿಯಮದಂತೆ Big ಎಂಬ ಪದಕ್ಕೆ Bigger ಎಂಬುದು ಕಂಪೇರಿಟಿವ್, Biggest ಎಂಬುದು ಸೂಪರ್‍ಲೇಟಿವ್ ಆಗುತ್ತದೆ. ಅದೇ ರೀತಿ Great ಎಂಬ ಪದಕ್ಕೆ Greater, Greatest ಎಂತಾಗುತ್ತದೆ. ಆದರೆ Good ಗೆ ಮಾತ್ರ Gooder, Goodest ಆದರೆ, ಅದು ಗ್ರಾಮ್ಯಾಟಿಕಲಿ ತಪ್ಪಾಗುತ್ತದೆ.

ಅದಕ್ಕೆ ಸರಿಯಾದ ವ್ಯಾಕರಣ Better, Best ಆಗುತ್ತದೆ, ಈ ತಾರತಮ್ಯದ ವ್ಯಾಕರಣವು ಯಾವ ವ್ಯಾಕರಣ ಎಂಬುದು ಮೂಲ ಪ್ರಶ್ನೆ?, ಹಾಗಾಗಿ ಈ ವಿಚಿತ್ರ ವಾದವನ್ನೇ ಟೈಟಲ್ ಮಾಡಬಾರದೇಕೆ ಎಂಬ ಕಾರಣದಿಂದಾಗಿ ಸಿನಿಮಾದ ಶೀರ್ಷಿಕೆಯನ್ನ ‘ಗುಡ್ ಗುಡ್ಡರ್ ಗುಡ್ಡೆಸ್ಟ್’ ಎಂದು ಇಟ್ಟಿದ್ದೇನೆ ಎಂದು ಹೇಳುವ ನಿರ್ದೇಶಕರ ವಾದವನ್ನ ಮೆಚ್ಚುವಂತದ್ದೆ.

ಈ ಟೈಟಲ್ ನ ಅರ್ಥ Good ಗೆ ಉತ್ತಮ, Gooder ಗೆ ಅತ್ಯುತ್ತಮ, Goodestಗೆ ಸರ್ವೋತ್ತಮ ಎಂಬ ಆರ್ಥವಿದೆ, ಈ ಅರ್ಥವು ಕಥೆಯಲ್ಲಿ ಬರುವ ಮೂರು ಹಂತಗಳಿಗೆ ಪೂರಕವಾಗಿದಿಯಂತೆ.

ಒಂದು ಕಥೆ ಸಹಜವಾಗಿ ಎರಡು, ಅಥವಾ ಮೂರು ಜನರ್‍ಗಳನ್ನ ಹೊಂದಿರುತ್ತದೆ, ಆದರೆ ಈ ಕಥೆ ಶುರುವಿನಲ್ಲಿ ಡಾರ್ಕ್ ಹ್ಯೂಮರ್, ಸೆಟೈರ್ ಕಾಮಿಡಿಯಿಂದ ಓಪನ್ ಆಗಿ, ಅಲ್ಲಿಂದ ಸಾಗುತ್ತಾ ಕವಲುಗಳಾಗಿ, ರೋಮ್ಯಾನ್ಸ್, ಥ್ರಿಲ್ಲರ್, ಡ್ರಾಮ, ಅ್ಯಕ್ಷನ್, ಸ್ಲ್ಯಾಪ್ಸ್‍ಸ್ಟಿಕ್, Neo- Noir, ಹೀಗೆ ಹಲವು ಜಾನರ್ಗಳು ಸೇಪರ್ಡೆಯಾಗುತ್ತವೆ, ಇಷ್ಟು ಜಾನರ್ ಗಳು ಒಂದು ಸಿನಿಮಾದಲ್ಲಿ ಬರುತ್ತಿರುವುದು ಕನ್ನಡದಲ್ಲಿ ಇದೇ ಮೊದಲು ಎಂದು ಹೇಳುತ್ತಾರೆ ನಿರ್ದೇಶಕರು.

ನಾಯಕ ಹಾಗೂ ನಾಯಕಿ ಸೇರಿ ಮುಖ್ಯ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿದೆ. ಇನ್ನು ತಂತ್ರಜ್ಞರ ವಿಚಾರಕ್ಕೆ ಬಂದರೆ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಮಾಡುತ್ತಿದ್ದಾರೆ. ಮರೀಸ್ವಾಮಿಯವರ ಸಂಕಲನ, ಕೆ.ಜಿ.ಎಫ್ ಚಿತ್ರದ ಕ್ಯಾಮೆರಮನ್ ಭುವನ್ ಗೌಡರ ಸಹಾಯಕ ಕ್ಯಾಮೆರಮೆನ್ ಆದ ಕುಮಾರ ಈ ಚಿತ್ರಕ್ಕೆ ಛಾಯಗ್ರಹಕರಾಗಿದ್ದಾರೆ.

ಈ ಚಿತ್ರವನ್ನ ಬಿಲ್ಡರ್ ಹಾಗು ಬಿ.ಜೆ.ಪಿ ಮುಖಂಡರಾದ ಸುರೇಶ್ ಬಿ ರವರು ತಮ್ಮ ಶೀನಿಧಿ ಪಿಕ್ಚರ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವು ಇವರ ಬ್ಯಾನರ್‍ನಡಿಯಲ್ಲಿ ಮೂಡಿ ಬರುತ್ತಿರುವ ಮೊದಲನೇ ಸಿನಿಮಾ.

Be the first to comment

Leave a Reply

Your email address will not be published. Required fields are marked *

Translate »
error: Content is protected !!