ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣ

ಎಸ್.ಎಸ್.ಫಿûಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ` ಚಿತ್ರಕ್ಕೆ ಕೊಲ್ಕತ್ತಾ ಹಾಗೂ ಮನಾಲಿಯಲ್ಲಿ 15ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಮೊದಲನೇ ಹಂತದಲ್ಲಿ ಮಾತಿನಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣವಾಗಿದೆ. ಗಣೇಶ್, ಶಾನ್ವಿ ಶ್ರೀವಾಸ್ತವ್, ಪಾರ್ವತಿ, ಸುಧಾರಾಣಿ, ಅಚ್ಯುತರಾವ್ ಹಾಗೂ ಪ್ರಯಾಗ ಮಾರ್ಟಿನ್ ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಜನವರಿ ಕೊನೆ ಅಥವಾ ಭ್ರವರಿ ಮೊದಲವಾರದಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ.

ಮಿಸ್ತರ್ & ಮಿಸ್ಸಸ್ ರಾಮಾಚಾರಿ’ ಹಾಗೂ `ರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ವಿಜಯ್ ನಾಗೇಂದ್ರ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಸಂಭಾಷಣೆ ಬರೆದಿದ್ದಾರೆ.
ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕೇರಳದ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವಾಸ್ತವ್ ಮೂವರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ದೇವರಾಜ್, ಅಚ್ಯುತಕುಮಾರ್, ಸುಧಾರಾಣಿ, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ  ಮಠದ್ ಅವರ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!