ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಕಿಂಗ್ ಪಿನ್ ಎನ್ನಲಾಗುತ್ತಿರುವ ಆರೋಪಿ ತರುಣ್ ರಾಜ್ ತೆಲುಗು ಸಿನಿಮಾದಲ್ಲಿ ಸಕ್ರಿಯವಾಗಿದ್ದ ಎಂದು ಗೊತ್ತಾಗಿದೆ.
ರನ್ಯಾ ಆಪ್ತ ಸ್ನೇಹಿತನಾಗಿದ್ದ ತರುಣ್ ರಾಜ್ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ. 2018 ರಲ್ಲಿ ಪರಿಚಯಂ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ. ಸಿನಿಮಾ ಮೂಲಕವೇ ರನ್ಯಾ ಜೊತೆ ಸ್ನೇಹ ಬೆಳೆಸಿರುವ ಮಾಹಿತಿ ಲಭ್ಯವಾಗಿದ್ದು, ಆ ಬಳಿಕ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಚಿತ್ರರಂಗದ ಕೆಲ ನಟಿಯರನ್ನು ಈತ ಸ್ಮಗ್ಲಿಂಗ್ ಗಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ರನ್ಯಾರಾವ್ ವಾಸಿಸುತ್ತಿದ್ದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್, ಕೋರಮಂಗಲದಲ್ಲಿರುವ ರನ್ಯಾ ಪತಿ ಜತಿನ್ ಮನೆ, ಡಿಆರ್ಐ ವಶದಲ್ಲಿರುವ ರನ್ಯಾ ಗೆಳೆಯ ತರುಣ್ ನಿವಾಸ, ಜಯನಗರ, ಬಸವನಗುಡಿ ಸೇರಿ ಒಟ್ಟು ಆರು ಕಡೆ ಇಡಿ ಅಧಿಕಾರಿಗಳು ತಲಾಶ್ ನಡೆಸಿದ್ದಾರೆ.
ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣದ ವ್ಯವಹಾರ ನಡೆದಿರುವ ಅನುಮಾನವಿದೆ. ಈ ಹಿಂದೆ ಡಿಆರ್ ಐ ಅಧಿಕಾರಿಗಳು ರನ್ಯಾ ಮನೆ ಮೇಲೆ ದಾಳಿ ನಡೆಸಿದಾಗ ಚಿನ್ನ ಹಾಗೂ 2 ಕೋಟಿಗೂ ಅಧಿಕ ಕ್ಯಾಶ್ ಸಿಕ್ಕಿತ್ತು. ರನ್ಯಾ ಮನೆಯಲ್ಲಿ ಪತ್ತೆಯಾಗಿರುವ ಹಣ ಚಿನ್ನ ಕಳ್ಳಸಾಗಣೆ ಮಾಡಲು ಹೊಂದಿಸಿಟ್ಟಿದ್ದ ಹಣ ಎಂದು ಶಂಕಿಸಲಾಗಿದೆ. 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಯಾರು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.

Be the first to comment