ಓಂಕಾರ್ ಮೂವೀಸ್ ಹಾಗೂ ರವಿ ಬಸ್ರೂರ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಂಪೂರ್ಣವಾಗಿ ಮಕ್ಕಳೇ ಅಭಿನಯಿಸಿರುವ ಪಕ್ಕಾ ಕಮರ್ಷಿಯಲ್ ಗಿರ್ಮಿಟ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುಮಾರು ೩೦೦ಕ್ಕೂ ಹೆಚ್ಚು ಮಕ್ಕಳು ಈ ಚಿತ್ರದಲ್ಲಿ ಬರುವ ಕಮರ್ಷಿಯಲ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಕಟಕ ಚಿತ್ರವನ್ನು ನಿರ್ದೇಶಿಸಿದ್ದ ರವಿ ಬಸ್ರೂರು ಅವರು ಈ ಚಿತ್ರದ ನಿರ್ದೇಶಕರು. ಪ್ರಮೋದ್ ಮರವಂತೆ, ಕಿನ್ನಾಳ್ ರಾಜ್, ಸಮ್ದೀಪ್ ಸಿರ್ಸಿ, ಬಿ.ಮಂಜುನಾಥ್, ಸೂಚನ್ ಶೆಟ್ಟಿ ಮುಂತಾದವರು ‘ಗಿರ್ಮಿಟ್`ಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಉಗ್ರಂ, ಕೆಜಿಎಫ್ ಚಿತ್ರಗಳಿಗೆ ಅದ್ಭುತವಾಗಿ ಆರ್ ಆರ್ ಮಾಡುವ ಮೂಲಕ ಗುರುತಿಸಿಕೊಂಡಿದ್ದ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿವುದರ ಜೊತೆಗೆ ಸಂಕಲನವನ್ನು ಮಾಡಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಭೂಷಣ್ ಈ ಚಿತ್ರದ ನೃತ್ಯ ನಿರ್ದೇಶಕರು.
ಆಕ್ಷನ್, ಕಾಮಿಡಿ, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡ ಈ ಚಿತ್ರದಲ್ಲಿ ಮಕ್ಕಳಿಗೆ ದೊಡ್ಡವರು ದನಿಯಾಗಿದ್ದಾರೆ. ಅಂದರೆ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ರಂಗಾಯಣ ರಘು, ಅಚ್ಯುತ್ಕುಮಾರ್, ಸುಧಾ ಬೆಳವಾಡಿ, ಸಾಧುಕೋಕಿಲ, ನಯನ, ಅನುಪಮಾಗೌಡ ಮುಂತಾದವರು ಮಕ್ಕಳ ಪಾತ್ರಗಳಿಗೆ ತಮ್ಮ ವಾಯ್ಸ್ ನೀಡಿದ್ದಾರೆ. ವಿಶೇಷವಾಗಿ ಗಿರ್ಮಿಟ್ ಚಿತ್ರದ ಹೀರೋ-ಹೀರೋಯಿನ್ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿz್ದÁರೆ. ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಗಿರ್ಮಿಟ್ ಒಂದು ಹೊಸ ಪ್ರಯೋಗವಾಗಿದೆ.
ಜಟ್ಟ, ಮೈತ್ರಿಯಂಥ ಹೊಸತನದ ಸಿನಿಮಾಗಳನ್ನು ನಿರ್ಮಿಸಿದ್ದ ಎನ್.ಎಸ್. ರಾಜಕುಮಾರ್ ಗಿರ್ಮಿಟ್ ಚಿತ್ರಕ್ಕೆ ಬಂಡವಾಳ ಹಾಕಿz್ದÁರೆ. ಈ ಚಿತ್ರದಲ್ಲಿ ನಟ ಪುನೀತ್ ರಾಜ್ಕುಮಾರ್ ಕೂಡ ಹಾಡೊಂದಕ್ಕೆ ದನಿಯಾಗಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ, ಪವಿತ್ರಾ ಹೆಸ್ಕತ್ತೂರ್, ಜಯೇಂದ್ರ ವಕ್ವಾಡಿ, ಮನೀಶ್ ಶೆಟ್ಟಿ, ಸಾರ್ಥಕ್ ಶೆಣೈ, ಮಹೇಂದ್ರ ಅಲ್ಲದೆ ಸಹನ ಬಸ್ರೂರು ಹಾಗೂ ಪವನ್ ಬಸ್ರೂರು ಸಹ ಅಭಿನಯಿಸಿದ್ದಾರೆ. ಇವರೆಲ್ಲ ಪುಟಾಣಿಗಳು ಎನ್ನುವುದು ಇಲ್ಲಿ ವಿಶೇಷ.
Pingback: CI CD services