ಕಿರುತೆರೆಯಲ್ಲಿ ‘ಗಿರ್ಕಿ’ ಪ್ರಸಾರ

ವಿಲೋಕ್ ರಾಜ್ ಹಾಗೂ ದಿವ್ಯಾ ಉರುಡುಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಗಿರ್ಕಿ’ ಇದೇ ಭಾನುವಾರ ರಾತ್ರಿ 7 ಗಂಟೆಗೆ ಮೊದಲ ಬಾರಿಗೆ ಕಲರ್ಸ್ ಕನ್ನಡ ಸಿನಿಮಾ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ವೀರೇಶ್ ಪಿಎಂ ನಿರ್ದೇಶನದ ‘ಗಿರ್ಕಿ’ ಚಿತ್ರ ರೋಮ್ಯಾಂಟಿಕ್ ಡ್ರಾಮ ಕಥಾಹಂದರ ಹೊಂದಿದೆ.

ಚಿತ್ರವನ್ನು ತರಂಗ ವಿಶ್ವ ನಿರ್ಮಾಣ ಮಾಡಿದ್ದು, ವಾಸುಕಿ ಭುವನ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ವಿಲೋಕ್ ರಾಜ್ ಸೇರಿದಂತೆ ದಿವ್ಯಾ ಉರುಡುಗ, ತರಂಗ ವಿಶ್ವ, ರಾಶಿ, ಮಹದೇವ್ ಬಣ್ಣ ಹಚ್ಚಿದ್ದಾರೆ.

ಮಧು ತುಂಬಾಕೆರೆ ಸಂಕಲನ, ನವೀನ್ ಕುಮಾರ್ ಚಲ್ಲಾ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ಹಾಗೂ ಮೋಹನ್ ಮತ್ತು ರಾಮು ಅವರ ನೃತ್ಯ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!