ಬಿಗ್‌ಬಾಸ್ ಮನೆಗೆ ಹೋಗಲು 5 ಸಾವಿರದಿಂದ 10 ಸಾವಿರ ರೂಪಾಯಿ ಮಾತ್ರ ಬಟ್ಟೆಗಳಿಗೆ ಖರ್ಚು ಮಾಡಿದ್ದೆ ಎಂದು ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಹೇಳಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗಲು ಕೆಲ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುಬಾರಿ ಬಟ್ಟೆಗಳನ್ನು ಖರೀದಿಸಿದ್ದಾರೆ. ಗಿಲ್ಲಿ ಮಾತ್ರ ಬಟ್ಟೆಗಳ ಖರ್ಚಿನ ವಿಷಯದಲ್ಲಿ ಸಂಪೂರ್ಣ ಭಿನ್ನ ದಾರಿ ಹಿಡಿದಿದ್ದಾರೆ.
‘ವೀಕೆಂಡ್ ಎಪಿಸೋಡ್‌ಗಳಿಗೆ ಬಟ್ಟೆಗಳು ಬರುತ್ತಿದ್ದವು. ನನಗೆ ಕಂಫರ್ಟ್ ಅನಿಸಿದ ಬಟ್ಟೆಗಳನ್ನೇ ನಾನು ಧರಿಸುತ್ತಿದ್ದೆ. ಬಿಗ್‌ಬಾಸ್‌ಗೆ ಹೋಗುವ ಮುಂಚೆ ನನ್ನ ತಾಯಿ ವಾಷಿಂಗ್ ಮಷಿನ್ ಕೊಡಿಸಿಕೊಡು ಎಂದು ಕೇಳಿದ್ದರು. ನನ್ನ ಬಳಿ ಇದ್ದ ಹಣದಲ್ಲಿ ಮೊದಲು ಅಮ್ಮನಿಗೆ ವಾಷಿಂಗ್ ಮಷಿನ್ ತೆಗೆಸಿಕೊಟ್ಟೆ. ಹಣದ ವಿಷಯದಲ್ಲಿ ನಾನು ಸದಾ ಜಾಗ್ರತೆ ವಹಿಸುತ್ತೇನೆ. ದುಬಾರಿ ಬಟ್ಟೆಗಳನ್ನು ಖರೀದಿಸುವ ಅಭ್ಯಾಸ ನನಗೆ ಇಲ್ಲ” ಎಂದು ಗಿಲ್ಲಿ ಹೇಳಿದ್ದಾರೆ.
ದೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕೆಲ ವಾರಗಳಲ್ಲೇ ಮನೆಯಿಂದ ಹೊರ ಬಂದ ಡಾಗ್ ಸತೀಶ್, ಸುಮಾರು 80 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಪ್ರತಿ ಶರ್ಟ್‌ಗೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿದ್ದರು.
ಬಿಗ್‌ಬಾಸ್ ಸಹ ಸ್ಪರ್ಧಿಗಳು, ಗಿಲ್ಲಿ ಬಡತನವನ್ನು ಮುಂದಿಟ್ಟುಕೊಂಡು ಜನರ ಸಿಂಪಥಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಆದರೆ ಬಿಗ್‌ಬಾಸ್ ಮುಗಿಯುವವರೆಗೂ ಗಿಲ್ಲಿ ಎಲ್ಲಿಯೂ ತನ್ನ ಬಡತನದ ಬಗ್ಗೆ ಹೇಳಿಕೊಂಡಿರಲಿಲ್ಲ.
—-





Be the first to comment