ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ “ಘೋಸ್ಟ್” ಚಿತ್ರ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ..
ಮೊದಲ ಬಾರಿಗೆ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್18ರ ಮಧ್ಯರಾತ್ರಿ 12ಕ್ಕೆ ಭರ್ಜರಿ ಫ್ಯಾನ್ ಶೋ ಆಯೋಜಿಸಲಾಗಿದೆ. ಶಿವಣ್ಣ ಅಭಿನಯದ “ಭಜರಂಗಿ” ಚಿತ್ರದ ಪ್ರದರ್ಶನ ಬೆಳಗ್ಗೆ 6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ “ಘೋಸ್ಟ್” ಆಗಿದೆ.
ಶಿವರಾಜ್ ಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣ ಹಾಗೂ ಶ್ರೀನಿ ನಿರ್ದೇಶನ ಚಿತ್ರಕ್ಕಿದೆ.


Be the first to comment