ಅನುಷ್ಕಾ ಶೆಟ್ಟಿಯ ‘ಘಾಟಿ’ ಸಿನಿಮಾದ ಮೇಲೆ ತೆಲಂಗಾಣ ಪೊಲೀಸ್ ಇಲಾಖೆಯ ವಿಭಾಗವೊಂದು ಹದ್ದಿನ ಕಣ್ಣಿಟ್ಟಿದ್ದು, ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಸಿನಿಮಾದಲ್ಲಿನ ಕೆಲ ಅಂಶಗಳು ಸಮಾಜಕ್ಕೆ ಹಾನಿಕಾರಕವಾಗಿವೆ ಎಂದು ಪೊಲೀಸ್ ಇಲಾಖೆಯ ವಿಭಾಗವೊಂದು ಹೇಳಿದೆ. ಅನುಷ್ಕಾ ಶೆಟ್ಟಿಯ ಹೊಸ ಸಿನಿಮಾ ಎರಡು ವರ್ಷದ ಬಳಿಕ ಬಿಡುಗಡೆ ಆಗುತ್ತಿದೆ. ಆದರೆ ಬಿಡುಗಡೆ ಹಿಂದಿನ ದಿನ ತೆಲಂಗಾಣ ಪೊಲೀಸರು ಸಿನಿಮಾ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಅನುಷ್ಕಾ ಶೆಟ್ಟಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ. ‘ಬಾಹುಬಲಿ 2’ ಸಿನಿಮಾದ ಬಳಿಕ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ಇದೀಗ ಅವರ ‘ಘಾಟಿ’ ಹೆಸರಿನ ಸಿನಿಮಾ ತೆರೆಗೆ ಬಂದಿದೆ. ತೆಲಂಗಾಣ ಪೊಲೀಸ್ ಇಲಾಖೆ ಮಾದಕ ವಸ್ತು ನಿಗ್ರಹ ವಿಭಾಗಕ್ಕೆ ಈಗಲ್ ಎಂದು ಹೆಸರಿದ್ದು, ಈಗಲ್ ನಿನ್ನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
‘ಘಾಟಿ’ ಸಿನಿಮಾದ ಟ್ರೈಲರ್ನಲ್ಲಿ ಆಕ್ಷೇಪಣಕಾರಿ ಅಂಶಗಳಿವೆ. ಈ ಸಿನಿಮಾ ಗಾಂಜಾ ಉತ್ಪಾದನೆ ಮತ್ತು ಸೇವನೆಗೆ ಪ್ರಚೋದನೆ ಮತ್ತು ಪ್ರಚಾರವನ್ನು ನೀಡುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಿನಿಮಾದ ಮೇಲೆ ನಾವು ಗಮನ ಹರಿಸಲಿದ್ದೇವೆ’ ಎಂದಿದೆ.
—–





Be the first to comment