ವಿಭಿನ್ನ ಹೆಸರಿನ ಚಿತ್ರ ಘಾರ್ಗಾ. ಚಿತ್ರದ ಬಜೆಟ್ ಬಗ್ಗೆ ಯಾವತ್ತೂ ಚಿಂತೆ ಮಾಡಬೇಡಿ ಎಂಬ ಭರವಸೆ ನಿರ್ಮಾಪಕರಿಂದ ದೊರೆತದ್ದರಿಂದ ಫೈಟ್ ಸೀನ್ ಗೆ 4 ಕ್ಯಾಮೆರಾ ಬಳಸಿದ್ದೇನೆ. ಏನು ಎತ್ತ ಅಂತ ವಿಚಾರಿಸದೆ ಒದಗಿಸಿ ಕೊಟ್ಟಿದ್ದಾರೆ ಎಂದು ನಿರ್ದೇಶಕ ಶಶಿಧರ್ ಹೇಳಿದರು. ಅಂದಹಾಗೆ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಈ ರೀತಿಯ ಸವಲತ್ತುಗಳನ್ನು ಒದಗಿಸಿರುವುದು ಬೇರೆ ಯಾರಿಗೋ ಅಲ್ಲ. ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅವರಿಗೆ! ನವ ನಾಯಕನಾಗಿ ಬೆಳ್ಳಿತೆರೆಗೆ ಬರುವುದರಿಂದ ಅದ್ದೂರಿ ಲಾಂಚಿಂಗ್ ಕಾರ್ಯಕ್ರಮವನ್ನು ಅಶೋಕ ಹೋಟೆಲ್ ನಲ್ಲಿ ಏರ್ಪಡಿಸಲಾಗಿತ್ತು.
ಅರುಣ್ ಪ್ರಸಾದ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾ, ಚಿತ್ರದ ಸನ್ನಿವೇಶಕ್ಕೆ ಮೊದಲೇ ರಿಹರ್ಸಲ್ ಮಾಡುತ್ತಿದ್ದೆ, ನಿರ್ದೇಶಕರ ಮೇಲೆ ಭರವಸೆ ಇದೆ, ಈ ಸಿನಿಮಾದಲ್ಲಿ ಸೊಫೆಸ್ಟಿಕೇಟೆಡ್ ಬರಹಗಾರನ ಪಾತ್ರ ಎಂದು ಹೇಳಿದರು. ಲಹರಿ ಸಂಸ್ಥೆಯ ಮಾಲೀಕ ಮನೋಹರ ನಾಯ್ಡು ಅರುಣ್ ಅವರ ಫಸ್ಟ್ ಲುಕ್ ಲಾಂಚ್ ಮಾಡಿದರು.
ನಾನು ಕೇಳಿದಷ್ಟು ಸಂಭಾವನೆಯನ್ನು ಮರು ಮಾತಿಲ್ಲ ದೆ ಕೊಟ್ಟದ್ದನ್ನು ನೋಡಿ ಜಾಸ್ತಿನೇ ಕೇಳಬಹುದುತ್ತಲ್ವ ಎಂದು ಅನಿಸಿತ್ತು ಎಂದು ಚಿತ್ರದಲ್ಲಿ ಪ್ರಧಾನ ಪಾತ್ರ ಮಾಡಿರುವ ಬಾಲಿವುಡ್ ನಟ ದೇವ್ ಗಿಲ್ ಹೇಳಿದರು.
ನನಗೆ ಒಳ್ಳೆಯ ಪಾತ್ರ ಜೊತೆಗೆ ನನ್ನಿಂದ ತುಂಬಾ ಚೆನ್ನಾಗಿ ಕೆಲಸ ತೆಗೆದಿದ್ದಾರೆ ಎಂದು ಅರುಣ್ ಸಾಗರ್ ಹೇಳಿದರು.
‘ಭಂಗಿ ಸೇದಿರೋ ‘ ಗೀತೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಗುರುಕಿರಣ್ ವಿಜಯ್ ಪ್ರಕಾಶ್ ಸಂಗೀತ ಇರೋ ಹಾಡು ಆಕರ್ಷಣೆ ಯಾಗಿತ್ತು. ಲಿರಿಕಲ್ ಸಾಂಗ್ ಬಿಡುಗಡೆಯಾಯಿತು.
ಚಿತ್ರದ ನಾಯಕಿ ರಾಘವಿ, ಕೃಷ್ಣಪ್ರಸಾದ್, ವಸಿಷ್ಠ ಸಿಂಹ ಮೊದಲಾದವರು ಉಪಸ್ಥಿತರಿದ್ದರು.
Be the first to comment