ಬ್ರಹ್ಮಗಂಟು ಕನ್ನಡ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಗೀತಾ ಭಾರತಿ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೆಚ್ಚಿನ ನಟಿಗೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.
ಗೀತಾ ಭಾರತಿ ಭಟ್ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ಒಳಗೆ ಹೋಗಿದ್ದರು. ಗಾಯಕಿಯೂ ಆಗಿರುವ ಗೀತಾ ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ. ಜೀವನದಲ್ಲಿ ಅನೇಕ ಬಾರಿ ಬಾಡಿ ಶೇಮಿಂಗ್ ಅನುಭವಿಸಿದ್ದ ಗೀತಾ ಭಾರತಿ ಭಟ್ ‘ಗುಂಡಮ್ಮ’ ಅಂತಲೇ ಕಿರುತೆರೆಯಲ್ಲಿ ಫೇಮಸ್ ಆಗಿದ್ದರು.
ಗೀತಾ ಭಾರತಿ ಭಟ್ ಅವರಿಗೆ ಸಿನಿಮಾದಲ್ಲೇ ಬಾಡಿ ಶೇಮಿಂಗ್ ಮಾಡಲಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಆರೋಪಿಸಿದ್ದರು. ಇವರು ನಾಯಕ ನಟಿ ಆಗಿ ನಟಿಸಿದ ರವಿಕೆ ಪ್ರಸಂಗ ಚಿತ್ರ ಗಮನ ಸೆಳೆದಿತ್ತು.
—-





Be the first to comment