ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ‘ಗಾರುಡಿಗ’ ಚಿತ್ರ ಡಿಸೆಂಬರ್ 1ರಂದು ತೆರೆಗೆ ಬರಲಿದೆ.
‘ಗಾರುಡಿಗ’ ಚಿತ್ರದ ಹಾಡು ಬಿಡುಗಡೆಗೊಂಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸ್ನೇಹಿತ ರಾಜ್‌ಬಹದ್ದೂರ್ ಹಾಡು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಡಾ.ಎಂ.ವೆಂಕಟಸ್ವಾಮಿ ಅವರು ಎಂ.ವಿ.ಫಿಲ್ಮ್ಸ್ ಬ್ಯಾನರ್ ನಿರ್ಮಾಣದ ಚಿತ್ರಕ್ಕೆ ವಿಧಾ.ಆರ್ ಆಕ್ಷನ್ ಕಟ್ ಹೇಳಿದ್ದಾರೆ.
‘ಚಿತ್ರದ ಕಥೆಯಲ್ಲಿ ನಾಯಕ ರೈತನಾಗಿದ್ದು, ಪಟ್ಟಣಕ್ಕೆ ಬಂದು ಬದುಕಿನ ಯುದ್ಧ ಗೆಲ್ಲುತ್ತಾನೆ. ‘ಗಾರುಡಿಗ’ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದೆ’ ಎಂದುನಿರ್ದೇಶಕರು ಹೇಳಿದ್ದಾರೆ.
ಚಿತ್ರಕ್ಕೆಮಾಗಡಿ ಮೂಲದ ರುದ್ವಿನ್ ನಾಯಕ ಆಗಿದ್ದಾರೆ. ನಾಯಕಿಯಾಗಿ ಮಾನಸ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ, ಆನೇಕಲ್, ಕನಕಪುರ, ಹಾರೋಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಎಂ.ಸಂಜೀವ್‌ರಾವ್ ಸಂಗೀತ, ಅನಿರುದ್ಧ್-ಭರತ್ ಛಾಯಾಗ್ರಹಣ ‘ಗಾರುಡಿಗ’ ಚಿತ್ರಕ್ಕಿದೆ.
—–

Be the first to comment