ಗರುಡಾಕ್ಷ ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್

ಕ್ಷಿರಪಥ ಮೂವೀಸ್ ಅಡಿಯಲ್ಲಿ ನರಸಿಂಹ ಮೂರ್ತಿ ಎಸ್ (೮ ನೇ ಮೈಲು) ಹಣ ಹೂಡಿರುವ `ಗರುಡಾಕ್ಷ’ ಕನ್ನಡ ಸಿನಿಮಾ ೨೦೧೮ ರಲ್ಲಿ ಸೆಟ್ಟೇರಿ ಶ್ರೀಧರ್ ವೈಷ್ಣವ್ ನಿರ್ದೇಶನದಲ್ಲಿ ತಯಾರಾಗಿ ಸೆನ್ಸಾರ್ ಮಂಡಳಿ ಇಂದ ಯು ಎ ಅರ್ಹತಾ ಪತ್ರವನ್ನು ಸಹ ಪಡೆದುಕೊಂಡಿದೆ.
ನಿರ್ಮಾಪಕ ನರಸಿಂಹ ಮೂರ್ತಿ ಮೂಲತಃ ಅರ್ಚಕರು. ಬೆಂಗಳೂರಿನ ಬಗಲುಗುಂಟೆ ಬಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸ್ವಂತ ಸ್ಥಳದಲ್ಲಿ ತಾವೇ ಸ್ವತಃ ಪ್ರತಿಷ್ಠಾಪನೆ ಮಾಡಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾರ್ಥ, ಹಣ, ದುರಾಸೆ ಈ ಚಿತ್ರದ ಕಥಾವಸ್ತು. ತಂದೆ ಮಕ್ಕಳ ಬಾಂಧವ್ಯದ ಕಥೆಯೇ ಗರುಡಾಕ್ಷ..
ಸಂಬAದಗಳ ಮೌಲ್ಯ ವ್ಯಕ್ತ ಮಾಡುತ್ತಾ ವಾಸ್ತವ ಜಗತ್ತಿನ ಪ್ರತಿರೂಪದ ಅನಾವರಣ ಗರುಡಾಕ್ಷ ಚಿತ್ರದಲ್ಲಿ ಕಾಣಬಹುದು.
ಈ ಚಿತ್ರದ ಮುಖಾಂತರ ಯದು (ಮೂಲ ಹೆಸರು ಚೇತನ್ – ಉಡುಂಬ ಚಿತ್ರದಲ್ಲಿ ದ್ವಿತೀಯ ನಾಯಕ) ನಾಯಕ ಆಗಿ ಪರಿಚಯ ಆಗುತ್ತಿದ್ದಾರೆ. ತನ್ನ ತಂದೆಯ ಸಾವು ಆಕಸ್ಮಿಕವಲ್ಲ ಅದು ಹತ್ಯೆ ಮಾಡಲಾಗಿದೆ ಎಂದು ತಿಳಿದಾಗ ತನ್ನ ಹದ್ದಿನ ಕಣ್ಣನ್ನು ವಿಸ್ತರಿಸುತ್ತಾ ಗುಟ್ಟನ್ನು ಬಯಲು ಮಾಡುತ್ತಾ ಹೋಗುತ್ತಾನೆ ಕಥಾ ನಾಯಕ. ನಿರ್ದೇಶಕ ಶ್ರೀಧರ್ ೩೫ ದಿವಸಗಳಲ್ಲಿ ಈ ಚಿತ್ರವನ್ನು ಬೆಂಗಳೂರಿನಲ್ಲಿ ಮಾತಿನ ಭಾಗ ಹಾಗೂ ಹಾಡುಗಳನ್ನು ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಚಿತ್ರದ ಕಥಾ ನಾಯಕಿ ರಕ್ಷ ಅವರಿಗೆ ಇದು ಮೊದಲ ಸಿನಿಮಾ. ವಸಂತ್ ಕುಮಾರ್ (ಲಕ್ಷಿ÷್ಮ ಬಾರಮ್ಮ ಟಿ ವಿ ಸೀರಿಯಲ್ ನಟ) ಹಾಗೂ ಕುಮುದಾ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ರಫೀಕ್, ಶ್ರೀಧರ್ ವೈಷ್ಣವ್, ಸತ್ಯಾರ್ಜುನ, ವಿಶ್ರುತ್ ಇನ್ಸೆ÷್ಪಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀವತ್ಸ ಅವರ ಸಂಗೀತಕ್ಕೆ ಹಿನ್ನಲೆ ಗಾಯಕರಾದ ಅನುರಾಧ ಭಟ್, ಸಂತೋಷ್ ವೆಂಕಿ, ಅಪೂರ್ವ ಶ್ರೀಧರ್ ಹಾಗೂ ನೇಹಾ ವೇಣುಗೋಪಾಲ್ ಧ್ವನಿ ನೀಡಿದ್ದಾರೆ. ಅರಸು ಅಂತಾರೆ ಹಾಗೂ ರಾಜು ಭಾಯಿ ತಲಾ ಎರಡು ಗೀತೆಗಳನ್ನು ರಚಿಸಿದ್ದಾರೆ.
ಎನ್ ಟಿ ಎ ವೀರೇಶ್ ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನ, ಮ್ಯಾನ್ ಲಿಯೊ ಸ್ಟುಡಿಯೋ ಅಲ್ಲಿ ಚಿತ್ರೇತರ ಚಟುವಟಿಕೆ ನಡೆಸಲಾಗಿದೆ. ಸುರೇಶ್ ನೃತ್ಯ ಸಂಯೋಜನೆ, ವೈಲೆಂಟ್ ವೇಲು ಸಾಹಸ ಹೇಮಂತ್ ಕಲಾ ನಿರ್ದೇಶನ ಒದಗಿಸಿದ್ದಾರೆ.
ನಿರ್ದೇಶಕ ಶ್ರೀಧರ್ ಜೊತೆಗೆ ಸಹಾಯಕರಾಗಿ ರಾಜು ಬಾಯಿ, ಕಲಂದರ್ ದೊಡ್ಡಮನಿ, ಅಭಯ್ ಸೂರ್ಯ ಹಾಗೂ ನಾಗರಾಜು (ಪೊಟ್ರೆ) ಕಾರ್ಯ ನಿರ್ವಹಿಸಿದ್ದಾರೆ.

This Article Has 1 Comment
  1. Pingback: Digital transformation companies

Leave a Reply

Your email address will not be published. Required fields are marked *

Translate »
error: Content is protected !!