‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ನಿರ್ದೇಶನದ ಬಹುನಿರೀಕ್ಷಿತ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಇಂದು (ನ.19) ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.
ರಕ್ಷಿತ್ ಶೆಟ್ಟಿ ಅವರ ‘ಪರಂವಃ’ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಚಿತ್ರ ಹಂಚಿಕೆ ಮಾಡಲಾಗುತ್ತದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಅವರ ಸಂಗೀತವಿದೆ.
ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಹರಿ ಮತ್ತು ಶಿವ ಎಂಬ ಎರಡು ಪಾತ್ರಗಳಿದ್ದು ಇದರಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ವೃಷಬ್ ಶೆಟ್ಟಿ ಅವರು ನಟಿಸಿದ್ದಾರೆ. ಮುಂಗೋಪ, ಹಿಂಸೆಗೆ ಹಿಂಜರಿಯದ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಹರಿ ಪೊಲೀಸ್ ಅಧಿಕಾರಿ ಆಗಿ ನಟಿಸಿದ್ದಾರೆ.
ಕರಾವಳಿ ಭಾಗದ ಗ್ಯಾಂಗ್ ಸ್ಟರ್ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿ ಇಲ್ಲಿ ಅನಾವರಣ ಆಗಿದೆ. ಟ್ರೈಲರ್‌ನಲ್ಲಿ ರಾಜ್ ಬಿ ಶೆಟ್ಟಿ ನಟನೆ ಗಮನ ಸೆಳೆದಿದ್ದು, ಕರಾವಳಿಯ ಹುಲಿವೇಷವೂ ಈ ಚಿತ್ರದಲ್ಲಿ ಇದೆ.
ಇದೇ ವೇಳೆ ಕ್ರೆಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ಮುಗಿಲ್‌ಪೇಟೆ ಹಾಗೂ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ‘100’ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಇಂದು ರಿಲೀಸ್ ಆಗಿವೆ.
____

Be the first to comment