ವಿಶ್ವದ ಪ್ರಮುಖ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವವಾದ ತಸ್ವೀರ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಯಾದ ಸುದ್ದಿಯ ಸಂಭ್ರಮದಲ್ಲಿರುವ ‘ಗಂಟುಮೂಟೆ’ ಚಿತ್ರತಂಡವು ಅಕ್ಟೋಬರ್ ತಿಂಗಳಲ್ಲಿ ಸಿನೆಮಾವನ್ನು ಕರ್ನಾಟಕದಾದ್ಯಂತ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.
ಚೀನಾ, ಕೊರಿಯಾ, ಜಪಾನ್ ರಾಷ್ಟ್ರಗಳಲ್ಲೂ ಭಾಷಾಂತರಿಸಿ ಬಿಡುಗಡೆಗೆ ಸಿದ್ಧವಾಗುತ್ತಿರುವ ‘ಗಂಟುಮೂಟೆ’ ಚಿತ್ರವು ಈ ವರ್ಷದ ಮೇ ತಿಂಗಳಿನಲ್ಲಿ ನ್ಯೂಯೋರ್ಕ್ನನ ನ್ಯೂಯೋರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್ ನಲ್ಲಿ ಮೊದಲ ಪ್ರದರ್ಶನ ಕಂಡು ‘ಅತ್ಯುತ್ತಮ ಸ್ಕ್ರೀನ್ಪ್ಲೇ’ ಪ್ರಶಸ್ತಿ ಪಡೆದಿದೆ. ಕೆನಡಾ ದಲ್ಲಿನ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಆಯ್ಕೆ ಸ್ಪರ್ಧೆಯಲ್ಲಿದ್ದ ಈ ಚಿತ್ರವು ಇಟಲಿ, ಆಸ್ಟ್ರೇಲಿಯಾ ಗಳಲ್ಲಿನ ಪ್ರತಿಷ್ಠಿತ ಚಲಚಿತ್ರೋತ್ಸವಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರೇಕ್ಷಕರ ಮನಗೆದ್ದಿದೆ. ಕನ್ನಡ ನಾಡಿನಲ್ಲಿನ ಜನತೆಗೆ ಈ ವರ್ಷದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಸಿನಿಮಾ ಇದಾಗಿದೆ ಎಂದರೆ ತಪ್ಪಾಗಲಾರದು.
೯೦ ರ ದಶಕದಲ್ಲಿ, ಹೈ ಸ್ಕೂಲ್ ಜೀವನದ ಸುತ್ತ ನಡೆಯುವ ಈ ಕಥೆ, ಹುಡುಗಿಯ ದೃಷ್ಟಿಕೋನದಲ್ಲಿನ ಭಾವನೆಗಳ ತೊಳಲಾಟದವನ್ನು ಅತಿ ನೈಜವಾಗಿ, ಎಲ್ಲರಿಗೂ ಇದು ನಮ್ಮದೇ ಕತೇ ಎನ್ನುವ ಹಾಗೆ ಚಿತ್ರಿಸಲಾಗಿದೆ. ಈ ಚಿತ್ರವನ್ನು ರೂಪ ರಾವ್ ನಿರ್ದೇಶಿಸಿದ್ದು, ಅಮೇಯುಕ್ತಿ ಸ್ಟುಡಿಯೊಸ್ ನಿರ್ಮಿಸಿದೆ. ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಮತ್ತು ನಿಶ್ಚಿತ್ ಕೊರೋಡಿ ಪ್ರಮುಖ ಪಾತ್ರದಲ್ಲಿದ್ದಾರೆ.
Pingback: zonnepaneelwereld
Pingback: Regression testing