ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಬೆಂಗಾಲಿ ಆವೃತ್ತಿಗೆ ಹೋಸ್ಟ್ ಆಗಿ ಆಯ್ಕೆಯಾಗಿದ್ದಾರೆ.
ಶೀಘ್ರದಲ್ಲೇ ಸ್ಟಾರ್ ಜಲ್ಶಾ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ವಿವಿಧ ಭಾಷೆಗಳಲ್ಲಿ ಈ ಶೋವನ್ನು ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್ ಸೇರಿದಂತೆ ವಿಜಯ್ ಸೇತುಪತಿ ಮೊದಲಾದ ಸ್ಟಾರ್‌ಗಳು ನಿರೂಪಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಹಿನ್ನೆಲೆಯ ವ್ಯಕ್ತಿಯೊಬ್ಬರು ಈ ಶೋ ನಿರೂಪಣೆ ಮಾಡುತ್ತಿರುವುದು ವಿಶೇಷವಾಗಿದೆ.
ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಗೆ ಪ್ರಸಿದ್ಧರಾದ ಸೌರವ್ ಗಂಗೂಲಿ ಈ ಶೋವನ್ನು ಯಾವ ರೀತಿ ನಡೆಸಿಕೊಡುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಬಿಗ್ ಬಾಸ್ ಬೆಂಗಾಲಿ ಭಾಷೆಯಲ್ಲಿ ಮೊದಲ ಸೀಸನ್ 2013ರಲ್ಲಿ ಪ್ರಸಾರವಾಗಿತ್ತು. ಅದನ್ನು ಮಿಥುನ್ ಚಕ್ರವರ್ತಿ ನಿರೂಪಿಸಿದ್ದರು. ಎರಡನೇ ಸೀಸನ್ 2016ರಲ್ಲಿ ಪ್ರಸಾರವಾಗಿದ್ದು, ಅದಕ್ಕೆ ಜೀತ್ ಹೋಸ್ಟ್ ಆಗಿದ್ದರು.
ಆದರೆ ಮೊದಲ ಎರಡು ಸೀಸನ್‌ಗಳು ನಿರೀಕ್ಷಿತ ಯಶಸ್ಸು ಕಾಣದ ಕಾರಣ ಶೋ ನಿಲ್ಲಿಸಲಾಗಿತ್ತು. ಈಗ ಸುಮಾರು 10 ವರ್ಷಗಳ ಬಳಿಕ ಬಿಗ್ ಬಾಸ್ ಬೆಂಗಾಲಿ ಆವೃತ್ತಿ ಮತ್ತೆ ಆರಂಭವಾಗುತ್ತಿದೆ. ಮೈದಾನದಲ್ಲಿ ಮ್ಯಾಜಿಕ್ ಮಾಡಿದ ಸೌರವ್ ಗಂಗೂಲಿ ಹೋಸ್ಟ್ ಆಗಿ ಯಾವ ರೀತಿ ಮ್ಯಾಜಿಕ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
—-





Be the first to comment