ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಗಂಧದಗುಡಿ ಚಿತ್ರ ಇಂದು ತೆರೆಕಂಡಿದೆ. ವಿಶ್ವದಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗುತ್ತಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಥಿಯೇಟರ್ ಗಳಲ್ಲಿ ಗಂಧದಗುಡಿ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಪುನೀತ್ ಅವರನ್ನು ಕಣ್ತುಂಬಿಸಿಕೊಂಡಿದ್ದಾರೆ. ಥಿಯೇಟರ್ ಗಳು ಹೌಸ್‍ಫುಲ್ ಆಗಿದ್ದು, ಎಲ್ಲೆಲ್ಲೂ ಅಪ್ಪು ಜಾತ್ರೆ ನಡೆಯುತ್ತಿದೆ.
ಗುರುವಾರ ಏರ್ಪಡಿಸಲಾಗಿದ್ದ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ನಗರದ ವಿವಿಧ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ.
ಸೆಲೆಬ್ರಿಟಿಗಳು ಚಿತ್ರ ವೀಕ್ಷಿಸಿದ್ದಾರೆ. ಗಣ್ಯರನ್ನ ಖುದ್ದು ಆಹ್ವಾನಿಸಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಲ್ಲರ ಜೊತೆ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಇನ್ಫೋಸಿಸ್ ನ ಸುಧಾಮೂರ್ತಿ ಸೇರಿದಂತೆ ನಟಿ ರಮ್ಯಾ, ರಕ್ಷಿತ್, ರಿಷಬ್, ದೇವರಾಜ್, ಪ್ರಜ್ವಲ್ ದೇವರಾಜ್, ಸಂಗೀತಾ ಶೃಂಗೇರಿ ಸೇರಿ ಹಲವರು ಚಿತ್ರ ವೀಕ್ಷಿಸಿದರು.
ಪ್ರಕೃತಿ ಮಡಿಲಲ್ಲಿ ಅಪ್ಪು ಕಳೆದಿರುವ ಅತ್ಯದ್ಭುತ ಕ್ಷಣಗಳನ್ನ ಕಣ್ತುಂಬಿಕೊಂಡ ಅಭಿಮಾನಿಗಳು ಭಾವುಕ ಆದರು. ‘ಗಂಧದಗುಡಿ’ ವೀಕ್ಷಿಸಿದ ಅಪ್ಪು ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ.
___

Be the first to comment