ತೆರೆಗೆ ಬರಲು ಗಂಧದ ಗುಡಿ ಸಿದ್ಧ

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಟ್ರೈಲರ್ ಮೆಚ್ಚುಗೆಗೆ ಪಾತ್ರವಾಗಿದ್ದು, ಅಕ್ಟೋಬರ್ 28ರಂದು ಸಿನಿಮಾ ರಿಲೀಸ್ ಆಗಲಿದೆ.

ರಾಜ್ಯದೆಲ್ಲೆಡೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಪುನೀತ್ ಕಟ್ಟಕಡೆಯದಾಗಿ ಅಭಿನಯಿಸಿರುವ ಗಂಧದ ಗುಡಿ ಚಿತ್ರದಲ್ಲಿ ಅಪ್ಪು ಧ್ವನಿ ಕೂಡ ಇದೆ.

ಗಂಧದ ಗುಡಿ ಕನ್ನಡ ನಾಡಿನ ದಟ್ಟ ಅರಣ್ಯದಲ್ಲಿ ಅಡಗಿದ ಅಪರೂಪದ ವಿಷಯಗಳನ್ನು ಕನ್ನಡಿಗರಿಗೆ ಕಟ್ಟಿ ಕೊಡುತ್ತಿದೆ. ಗಂಧದ ಗುಡಿ ಸಿನಿಮಾದಲ್ಲಿ ಒಂದು ಜರ್ನಿ ಇದೆ. ಈ ಜರ್ನಿ ಮೂಲಕವೇ ಅಪ್ಪು ವನ್ಯಜೀವಿ, ಪ್ರಕೃತಿಯ ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದ್ದಾರೆ.

ಗಂಧದ ಗುಡಿ ಕಮಷಿರ್ಯಲ್​ ಸಿನಿಮಾ ಅಲ್ಲ. ಇದು ವನ್ಯಮೃಗ, ಕಾಡು ಕುರಿತ ಡಾಕ್ಯುಮೆಂಟರಿ ಆಗಿದೆ.

ರಾಜ್ಯದ ಬಹುತೇಕ ಎಲ್ಲ ಭಾಗಗಳಿಗೆ ಪುನೀತ್, ಅಮೋಘ ವರ್ಷ ಹಾಗೂ ಚಿತ್ರತಂಡ ಪ್ರವಾಸ ಮಾಡಿ ಚಿತ್ರೀಕರಣ ಮಾಡಲಾಗಿದೆ. ಸಮುದ್ರದ ಆಳದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಈ ಎಲ್ಲ ಅಂಶಗಳು ಟ್ರೈಲರ್ ನಲ್ಲಿ ಮೂಡಿ ಬಂದಿವೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!