‘ಗಂಧದಕುಡಿ’ಯ ಮುಡಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳ ಗರಿ!

ಮಂಗಳೂರಿನ ಇನ್ವೆಂಜರ್‍ಟೆಕ್ನಾಲಜೀಸ್ ಬ್ಯಾನರ್‍ನಲ್ಲಿ ಕೆ. ಸತ್ಯೇಂದ್ರ ಪೈ ಹಾಗೂ ಕೆ ಮೋಹನ್ ಪೈ ಅವರ ನಿರ್ಮಾಣದಲ್ಲಿಇಮ್ಯಾಜಿನೇಷನ್ ಮೂವೀಸ್‍ನ ಸಂತೋಷ್ ಶೆಟ್ಟಿಕಟೀಲುಇವರ ನಿರ್ದೇಶನದ‘ಗಂಧದಕುಡಿ/ಚಂದನ್‍ವನ್’ ಚಲನಚಿತ್ರಕ್ಕೆ ನವೆಂಬರ್ 25ರಂದು ಮುಂಬೈಯಲ್ಲಿ ನಡೆದ ಮೂನ್‍ವೈಟ್ ಚಲನಚಿತ್ರೋತ್ಸವದಲ್ಲಿ 4ಅಂತರಾಷ್ಷ್ರೀಯ ಪ್ರಶಸ್ತಿಗಳು ಒಲಿದಿವೆ. ಎಂದುಚಿತ್ರದ ನಿರ್ಮಾಪಕರಾದ ಸತ್ಯೇಂದ್ರ ಪೈ ತಿಳಿಸಿರುತ್ತಾರೆ.

ಅಗಸ್ಟ್ ತಿಂಗಳಿನಲ್ಲಿ ಅಮೆರಿಕಾದಕ್ಯಾಲಿಫೋರ್ನಿಯಾದ“ಸ್ಯಾನ್‍ಡಿಯಾಗೋಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ”ದಲ್ಲಿ ‘Best Family Feature 2018’ (ಅತ್ಯುತ್ತಮಕೌಟುಂಬಿಕ ಚಲನಚಿತ್ರ), ಅಕ್ಟೋಬರ್ ತಿಂಗಳಿನಲ್ಲಿ ಕೋಲ್ಕತ್ತಾದಲ್ಲಿ ನಡೆದ NEZ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ“ಅತ್ಯುತ್ತಮ ಚಲನಚಿತ್ರ” ಹಾಗೂ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಪ್ರಸಾದ್ ಕೆ ಶೆಟ್ಟಿ‘ಅತ್ಯುತ್ತಮ ಹಿನ್ನಲೆ ಸಂಗೀತ’ ಪ್ರಶಸ್ತಿಗಳನ್ನು ಪಡೆದಿದ್ದು, ಇದೀಗ ನವೆಂಬರ್ 24 ಮತ್ತು 25ರಂದು ಮುಂಬೈಯಲ್ಲಿ ನಡೆದಿರುವ ‘ಮೂನ್‍ವೈಟ್ ಫಿಲಂಸ್‍ಅಂತರಾಷ್ಟ್ರೀಯ ಚಲನಚಿತ್ರೋತ್ಸವ”ದಲ್ಲಿ‘ಅತ್ಯುತ್ತಮಚಿತ’, ‘ಅತ್ಯುತ್ತಮ ನಿರ್ದೆಶಕ’ ಪ್ರಶಸ್ತಿ ಸಹಿತ ಪ್ರಶಸ್ತಿಗಳ ಗೊಂಚಲನ್ನೇ ಬಾಚಿಕೊಂಡಿರುತ್ತದೆ.ಮುಂಬೈನ ‘ಮೂನ್‍ವೈಟ್ ಫಿಲಂಸ್’ನವರು ಆಯೋಜಿಸಿರುವ ‘ಮೂನ್‍ವೈಟ್‍ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಭಾರತದ ವಿವಿಧ ರಾಜ್ಯಗಳ ವಿವಿಧ ಭಾಷೆಗಳ ಹಾಗೂ ವಿದೇಶಗಳ ಸಾವಿರಕ್ಕೂಅಧಿಕಚಲನಚಿತ್ರಗಳು ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು ಸುಮಾರು 50 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದ್ದು, ಅವುಗಳಲ್ಲಿ ‘ಗಂಧದಕುಡಿ/ ಚಂದನ್‍ವನ್’ ಚಲನ ಚಿತ್ರವು‘ಅತ್ಯುತ್ತಮ ಚಲನಚಿತ್ರ’,ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್‍ಕುಮಾರ್ ಕಟೀಲು ಗೆ‘ಅತ್ಯುತ್ತಮ ನಿರ್ದೇಶಕ’, ಹಾಗೂ ಚಿತ್ರದಲ್ಲಿನ ನಟನೆಗಾಗಿಕನ್ನಡ ಚಿತ್ರರಂಗದ ಹಿರಿಯ ನಟರಮೇಶ್ ಭಟ್ ಹಾಗೂ ಕಿರುತೆರೆ ನಟಿ ಜ್ಯೋತಿರೈ‘ಅತ್ಯುತ್ತಮ ನಟ’, ‘ಅತ್ಯುತ್ತಮ ನಟಿ’ಜೊತೆಗೆ ಚಿತ್ರದಲ್ಲಿ ನಟಿಸಿದ ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾಸ್ಟರ್ ವಿಘ್ನೇಶ್, ಮಾಸ್ಟರ್ ಶ್ರೀಶ ಶೆಟ್ಟಿ, ಮಾಸ್ಟರ್ ಶ್ರೇಯಸ್ ಶೆಟ್ಟಿ, ಬೇಬಿ ಆ್ಯಶ್ಲಿನ್ ಡಿಸೋಜಾ, ಬೇಬಿ ಪ್ರಣತಿ ಮೂನ್‍ವೈಟ್ ಫಿಲಂಸ್‍ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಶಸ್ತಿಯನ್ನು (Special Festival Mention) ಪಡೆದಿರುತ್ತಾರೆ.

‘ಗಂಧದಕುಡಿ/ ಚಂದನ್‍ವನ್’ ಚಲನಚಿತ್ರವು ಮಂಗಳೂರಿನ ನಿರ್ದೇಶಕ ಸಂತೋಷ್ ಶೆಟ್ಟಿಕಟೀಲುಅವರ ನಿರ್ದೇಶನದ ಎರಡನೆಯ ಚಲನಚಿತ್ರವಾಗಿದ್ದು, ಮೊದಲ ಚಲನಚಿತ್ರ‘ಕನಸು ಕಣ್ಣುತೆರೆದಾಗ’ಕೂಡಅಂತರಾಷ್ಡ್ರೀಯ ಮಟ್ಟದಲ್ಲಿ ವಿಮರ್ಶಕರ ಮೆಚ್ಚುಗೆ ಗಳಿಸಿದ ಪ್ರಶಸ್ತಿಗೆ ಪಾತ್ರವಾಗಿತ್ತು.ಎಂಬುದುಗಮನಾರ್ಹ ವಿಷಯವಾಗಿದೆ.ನಿರ್ದೇಶಕರುತಮ್ಮ ಮೊದಲನೆಯಚಿತ್ರದಲ್ಲಿ ಸ್ವಚ್ಚತೆಯಕುರಿತಾದ ಸಂದೇಶವನ್ನು ಮಕ್ಕಳ ಮುಖಾಂತರ ಪ್ರೇಕ್ಷಕರಿಗೆ ತಲುಪಿಸಿದ್ದರು. ಈ ಬಾರಿ‘ಗಂಧದಕುಡಿ/ ಚಂದನ್‍ವನ್’ಚಿತ್ರವುಮನೋರಂಜನೆಜೊತೆಗೆ, ಸಂಪೂರ್ಣ ಹಾಸ್ಯ ಹಾಗೂ ವಿಭಿನ್ನ ಪಾತ್ರಗಳೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಜಾಗೃತಗೊಳಿಸುವ ಪ್ರಯತ್ನವನ್ನುಚಿತ್ರರಂಗದಲ್ಲಿಮೊಟ್ಟಮೊದಲ ಬಾರಿಗೆವಿಭಿನ್ನಶೈಲಿಯಲ್ಲಿ ನಿರ್ದೇಶಿಸಿದ್ದು,ಡಿಸೆಂಬರ್ ತಿಂಗಳಾಂತ್ಯದಲ್ಲಿ ಚಿತ್ರದಆಡಿಯೋ ಬಿಡುಗಡೆಗೊಳ್ಳಲಿದ್ದು ಅತೀ ಶೀಘ್ರದಲ್ಲಿ ತೆರೆಕಾಣಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!