‘ಗೇಮ್ ಚೇಂಜರ್’ ರಿಲೀಸ್ ಸಂದರ್ಭ ಕ್ಯಾತೆ

ರಾಮ್ ಚರಣ್ ನಟನೆಯ ಬಹುನಿರೀಕ್ಷಿತ  ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಮಧ್ಯೆ ಚಿತ್ರತಂಡಕ್ಕೆ ಸಮಸ್ಯೆ  ಎದುರಾಗಿದೆ.

ಗೇಮ್ ಚೇಂಜರ್ ಸಿನಿಮಾ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.  ‘ಇಂಡಿಯನ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ, ‘ಗೇಮ್ ಚೇಂಜರ್’ ಸಿನಿಮಾವನ್ನು ತಮಿಳು ನಾಡಿನಲ್ಲಿ ಬಿಡುಗಡೆ ಮಾಡಬಾರದು ಎಂದು ನಿರ್ಮಾಪಕರ ಕೌನ್ಸಿಲ್​ಗೆ ದೂರು ನೀಡಿದೆ. ಶಂಕರ್, ಲೈಕಾ ನಿರ್ಮಾಣ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದ ಉಲ್ಲಂಘನೆ ಮಾಡಿದ್ದು, ನಿಯಮದಂತೆ  ಶಂಕರ್ ನಿರ್ದೇಶನದ ಯಾವುದೇ ಸಿನಿಮಾವನ್ನು ತಮಿಳುನಾಡಿನಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಲೈಕಾ ಸಂಸ್ಥೆ ಆಗ್ರಹಿಸಿದೆ.

‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣದ ಸಮಯದಿಂದ  ಶಂಕರ್ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್ ನಡುವೆ ವಿವಾದ  ನಡೆಯುತ್ತಲೇ ಇವೆ. ಪ್ರಕರಣ ಕೋರ್ಟ್ ಮೆಟ್ಟಿಲು  ಏರಿ ಶಂಕರ್, ಲೈಕಾ ಪ್ರೊಡಕ್ಷನ್ ನಿರ್ಮಾಣದ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ಆದರೂ ಸಿನಿಮಾ  ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆಯ್ತು. ಲೈಕಾ ನಿರ್ಮಾಣ ಸಂಸ್ಥೆ ಈಗ ಶಂಕರ್ ‘ಇಂಡಿಯನ್ 3’ ಸಿನಿಮಾ ನಿರ್ದೇಶನ ಮಾಡಿಕೊಡಬೇಕು ಎಂದಿದೆ.   ಈಗ ‘ಗೇಮ್ ಚೇಂಜರ್’ ಬಿಡುಗಡೆ ಮಾಡದಂತೆ ನಿರ್ಮಾಪಕರ ಕೌನ್ಸಿಲ್​ಗೆ ದೂರು ನೀಡಿದೆ.

ಶಂಕರ್, ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು, ಕಮಲ್ ಹಾಸನ್ ಅವರುಗಳು ಲೈಕಾ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ಆಡಿದ್ದು, ವಿವಾದವನ್ನು ಬಗೆಹರಿಸಿದ್ದಾರೆ ಎನ್ನಲಾಗಿದೆ. ‘ಗೇಮ್ ಚೇಂಜರ್’ ಸಿನಿಮಾ ತಮಿಳುನಾಡಿನಲ್ಲಿ  ಜನವರಿ 10 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!