ನಿರೀಕ್ಷೆ ಮೂಡಿಸಿದ ಗಾಳಿಪಟ2 ಟ್ರೈಲರ್

ಬಹುನಿರೀಕ್ಷಿತ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ಮೂಡಿಸಿದೆ.

ದಿಗಂತ್, ಗಣೇಶ್, ಪವನ್, ಅನಂತನಾಗ್ ಮುಖ್ಯ ಭೂಮಿಕೆಯಲ್ಲಿರುವ ಗಾಳಿಪಟ2 ಸಿನಿಮಾದಲ್ಲಿ ಸ್ನೇಹ, ಸಂಕಟದ ಕಥಾಹಂದರ ಮೂಡಿ ಬಂದಿದೆ. ಚಿತ್ರದ ದೃಶ್ಯಗಳು ಕುತೂಹಲ ಮೂಡಿಸಿವೆ.

ಗಾಳಿಪಟ-2 ಸಿನಿಮಾ ಆಗಸ್ಟ್ 12ರಂದು ತೆರೆಗೆ ಬರುತ್ತಿವೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಮೊದಲ ಭಾಗ ಸಕ್ಸಸ್ ಆದ ಖುಷಿಯಲ್ಲಿ ಭಟ್ಎರಡನೇ ಭಾಗ ತಯಾರಿಸಿದ್ದಾರೆ.

ಗಾಳಿಪಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಮತ್ತು ದಿಗಂತ್ ವಿದ್ಯಾರ್ಥಿಗಳಾಗಿ ನಟನೆ ಮಾಡಿದ್ದಾರೆ. ಅನಂತ್ ನಾಗ್ ಅವರು ಎಂಎ ಕನ್ನಡ ಮೇಷ್ಟ್ರು ಆಗಿ ಕಾಣಿಸಿಕೊಂಡಿದ್ದಾರೆ.
“ಮೊದಲ ಭಾಗಕ್ಕಿಂತ 2ನೇ ಭಾಗಕ್ಕೆ ನಾನು 6 ಕೆಜಿ ಸಣ್ಣಗಾಗಿರುವೆ ” ಎಂದು ಗೋಲ್ಡನ್ ಗಣೇಶ್ ಹೇಳಿದ್ದಾರೆ.

ಈ ಚಿತ್ರದ ಪ್ರಮುಖ ಭಾಗ ಕುದುರೆಮುಖದ ಪ್ರಕೃತಿ ಸೌಂದರ್ಯದಲ್ಲಿ ಚಿತ್ರೀಕರಣ ಆಗಿದ್ದು, ನೋಡುಗರಿಗೆ ಹೊಸ ಅನುಭವ ನೀಡಲಿದೆ. ಅನಂತನಾಗ್‌ ಮತ್ತು ಮೂರು ಜನ ನಾಯಕರ ನಡುವಿನ ದೃಶ್ಯಗಳು ಸಿನಿಮಾದಲ್ಲಿ ಬಹಳ ಮುಖ್ಯ ಎಂದು ನಿರ್ದೇಶಕ ಯೋಗರಾಜ್ ಭಟ್ ಈಗಾಗಲೇ ಹೇಳಿದ್ದಾರೆ.

‘ಗಾಳಿಪಟ 2’ ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಮೇಶ್‌ ರೆಡ್ಡಿ ಚಿತ್ರ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಸಂಯುಕ್ತಾ ಮೆನನ್‌, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾ ಯಾವ ರೀತಿ ಪ್ರೇಕ್ಷಕರ ಹೃದಯ ಗೆಲ್ಲುತ್ತದೆ ಎನ್ನುವುದಕ್ಕೆ ಉತ್ತರ ಆಗಸ್ಟ್ 12ರಂದು ಸಿಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!