Galipata 2 : ರಾ ರಾ ರಕ್ಕಮ್ಮ ಹಾಡಿನ ನಂತರ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಯ್ತು ಗಾಳಿಪಟ 2 ಚಿತ್ರದ ದೇವ್ಲೆ ದೇವ್ಲೆ ಹಾಡು..!!

ನಿರ್ದೇಶಕರಾಗಿ ಜನಪ್ರಿಯರಾಗಿರುವ ಯೋಗರಾಜ್ ಭಟ್ ಗೀತರಚನೆಕಾರರಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ನಮ್ಮ ಮನದಲ್ಲಿ ಗುನಗುತ್ತಿವೆ. ಭಟ್ಟರು ಬರೆದಿರುವ ಎಣ್ಣೆ ಹಾಡುಗಳನ್ನು ಹೆಚ್ಚಾಗಿ ಹಾಡಿರುವವರು ವಿಜಯ್ ಪ್ರಕಾಶ್ ಹಾಗೂ ಸಂಗೀತ ನೀಡಿರುವವರು ಅರ್ಜುನ್ ಜನ್ಯ.ಈ ಮೂವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿವೆ, ಅದೇರೀತಿ “ಗಾಳಿಪಟ 2” ಚಿತ್ರದ ಮತ್ತೊಂದು ಎಣ್ಣೆ ಸಾಂಗ್ “ದೇವ್ಲೆ ದೇವ್ಲೆ” ಜುಲೈ 14 ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದ ಈ ಹಾಡು ಈಗಾಗಲೇ ವಿಕ್ರಾಂತ್ ರೋಣ(Vikranth Rona) ರಾ ರಾ ರಕ್ಕಮ್ಮ ಸಾಂಗ್ ನಂತರ ಎರಡನೆಯ ಸ್ಥಾನದಲ್ಲಿದೆ ಹಾಗಾಗಿ ಗಾಳಿಪಟ 2(Galipata2) ಚಿತ್ರದ “ದೇವ್ಲೆ ದೇವ್ಲೆ….” ಹಾಡು ಸಕತ್‌ ಟ್ರೆಂಡಿಂಗ್‌ ನಲ್ಲಿದ್ದು ಸಂಗೀತಪ್ರಿಯರ ಗಮನಸೆಳೆದಿದೆ. ಹಾಗಾಗಿ ಗಣೇಶ್‌ ಆಭಿಮಾನಿಗಳಿಗೆ ಚಿತ್ರತಂಡದಿಂದ ಒಂದು ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ. ಅದೇನಂದರೆ ಈ “ದೇವ್ಲೆ ದೇವ್ಲೆ” ಹಾಡಿಗೆ ಯಾರು ರೀಲ್ಸ್‌ ಮಾಡುತ್ತಾರೋ ಆ ರೀಲ್ಸ್‌ ನಲ್ಲಿ ಯಾರು ಅತೀಹೆಚ್ಚು ವೀವ್ಸ್‌ ಮತ್ತು ಲೈಕ್ಸ್‌ ಪಡೆದುಕೊಳ್ಳುತ್ತಾರೋ ಅವರಿಗೆ ಗೋಲ್ಡ್ದನ್‌ ಸ್ಟಾರ್‌ ಗಣೇಶ್‌ ಜೊತೆ ಸಿನೆಮಾ ನೋಡುವ ಸುವರ್ಣಾವಕಾಶವನ್ನ ನೀಡಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆ ಬಿಡುಗಡೆಯಾಗಲಿರುವ ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು “ಗಾಳಿಪಟ 2” ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!