‘ಬಹುನಿರೀಕ್ಷಿತ’ ಗಡಿಯಾರ ಸ್ಟಾರ್ ಸಿನಿಮಾಗಳಿಗೆ ಪೈಪೋಟಿ ನಿಡುತ್ತಾ ಚಿತ್ರ!

ರಾಜಮನೆತನಗಳ ತೆರೆಮೆರೆಯ ಸತ್ಯವನ್ನು ತಿಳಿಸುವ , ನೈಜ ಘಟನೆಯ ಆಧಾರಿತ ಕಥೆಯುಳ್ಳ “ಗಡಿಯಾರ” ಚಿತ್ರದಲ್ಲಿ ನಿರೂಪಕಿ, ನಟಿ ಶೀತಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರೋದು ನಿಮ್ಗೆ ಗೊತ್ತಿರುವ ಸಂಗತಿ. ಈಗ ಚಿತ್ರತಂಡ ಗಡಿಯಾರದ ಇನ್ನಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಿದೆ.

ಈ ಚಿತ್ರ ಕದಂಬರು , ಹೊಯ್ಸಳರು , ರಜಪೂತರು , ಚಾಲುಕ್ಯ ರಾಜಮನೆತನಗಳ ಇತಿಹಾಸ ನೆನಪಿಸುವ ಚಿತ್ರವಾಗಲಿದೆ. ಈಗಾಗಲೇ ಸೈಲೆಂಟಾಗಿಯೇ ಸದ್ದು ಮಾಡುತ್ತಿರುವ ಗಡಿಯಾರ ಚಿತ್ರ ಹಲವಾರು ವಿಶೇಷಗಳನ್ನು ಒಳಗೊಂಡಿದೆ. ಬಹು ಭಾಷೆಯಲ್ಲಿ ತೆರೆ ಕಾಣಲಿರುವ ಚಿತ್ರದಲ್ಲಿ ಆಯಾ ಭಾಷೆಯಲ್ಲಿ, ಆ ಭಾಷೆಯ ಪ್ರಮುಖ ಕಲಾವಿದರು ನಟಿಸಲಿದ್ದು, ಖಡಕ್ ಆಫೀಸರ್ ಎಸ್.ಪಿ.ಸಾಂಗ್ಲಿಯಾನ ಬಣ್ಣ ಹಚ್ಚಲಿದ್ದಾರೆ. ಎಸ್ ಪಿ ಸಾಂಗ್ಲಿಯಾನ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜ ನಟರುಗಳಿರುವ ” ಗಡಿಯಾರ ” ದಲ್ಲಿ 4 ಅದ್ಬುತ ಸಾಹಸ ಸನ್ನಿವೇಶಗಳಿವೆ …ಖ್ಯಾತ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ರವರ ಸಾಹಸ ನಿರ್ದೇಶನದಲ್ಲಿ ಅದ್ಬುತವಾಗಿ ಸಾಹಸಗಳು ಮೂಡಿಬಂದಿದೆ . ಕನ್ನಡದಲ್ಲಿ ಶರತ್ ಲೋಹಿತಾಶ್ವ ಸುಚೇಂದ್ರ ಪ್ರಸಾದ್, ರಾಧ ರಾಮಚಂದ್ರ, ಮನ್ ದೀಪ್ ರಾಯ್,ಪ್ರದೀಪ್ ಪೂಜಾರಿ, ದೀಪಕ್ ಶೆಟ್ಟಿ ಹಾಗೂ ಇನ್ನಿತರ ಪ್ರಮುಖ ತಾರಾಗಣ ಇರಲಿದೆ. ಜೊತೆಗೆ ಚಿತ್ರದಲ್ಲಿ 4 ರೋಮಾಂಚಕಾರಿ ಹಾಡುಗಳಿದ್ದು , ಹೇಮಂತ್ ಕುಮಾರ್ , ವ್ಯಾಸರಾಜ್ , ಅನುರಾಧ ಭಟ್ , ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕರಾದ ಹೈಟ್ ಮಂಜು ರವರು ಚಿತ್ರಿಸಿದ್ದಾರೆ. ಸಾಕಷ್ಟು ವಿಭಿನ್ನ ವಿಶೇಷ ಕಥಾ ಹಂದರವಿರುವ ” ಗಡಿಯಾರ ” ಸಧ್ಯದಲ್ಲಿ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಿರುವ ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಬಿಕ್ ಮೊಗವೀರ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ದಾರೆ.

ಫಸ್ಟ್ ಲುಕ್ ನಿಂದ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಇನ್ನಷ್ಟು ಇಮ್ಮಡಿ ಮಾಡಿರುವ ಮೊಗವೀರ್ ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ಅನ್ನುವುದು ಸಧ್ಯದಲ್ಲೇ ರಿವೀಲ್ ಆಗಲಿದೆ. ಚಿತ್ರದಲ್ಲಿ ಕಾಮಿಡಿ , ಮಾಸ್ , ಲವ್ , ಹಿಸ್ಟಾರಿಕಲ್ , ಹಾರರ್ , ಥ್ರಿಲ್ಲರ್ , ಸೇರಿದಂತೆ ಎಲ್ಲಾ ಅಂಶಗಳನ್ನೂ ಮನೋರಂಜನಾತ್ಮಕವಾಗಿ ಹೇಳುವ ಪ್ರಾಮಾಣಿಕ ಪ್ರಯತ್ನವನ್ನು ನೋಡಿ ಗಾಂಧಿನಗರ ಅಚ್ಚರಿ ಪಟ್ಟಿದೆ. 2020ರಲ್ಲಿ ರಿಲೀಸ್ ಆಗುವ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಗೆ ಗಡಿಯಾರ ಚಿತ್ರವೂ ಸೇರಿರುವುದೇ ಇದಕ್ಕೆ ಸಾಕ್ಷಿ. ಇದು ಕನ್ನಡ ಚಿತ್ರರಂಗ ಬದಲಾಗುತ್ತಿರುವ ಲಕ್ಷಣ ಅಂದರೂ ತಪ್ಪಾಗಲಾರದು, ಯಾಕೆಂದರೆ ಹಿಂದೆಲ್ಲಾ ಕೇವಲ ಸ್ಟಾರ್ ಸಿನಿಮಾಗಳಿಗೆ ಮಾತ್ರ ‘ಬಹುನಿರೀಕ್ಷಿತ’ ಎಂಬ ಟ್ಯಾಗ್ ಹಾಕುತ್ತಿದ್ದರು. ಆದರೀಗ, ಕಂಟೆಂಟ್ ಅನ್ನೇ ಸ್ಟಾರ್ ಆಗಿಟ್ಟುಕೊಂಡ ಚಿತ್ರಗಳು ಕೂಡ ‘ಬಹುನೀರಿಕ್ಷಿತ’ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದೆ. ಇದರಲ್ಲಿ ‘ಗಡಿಯಾರ’ ಚಿತ್ರ ಪ್ರಮುಖವಾದುದು.

@ಬಿಸಿನಿಮಾಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!