ಗಡಿಯಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಚಂದನವನದಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ , ಬಹು ತಾರಾಂಗಣದ ವಿಭಿನ್ನ ಕಥಾಹಂದರದ ಚಿತ್ರ ” ಗಡಿಯಾರ ” . ಹೌದು ಪ್ರಬಿಕ್ ಮೊಗವೀರ್ ನಿರ್ದೇಶನ ಮತ್ತು ನಿರ್ಮಾಣದ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರ ಮೂಲಕ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಮಾಡಿಸಿರುವ ಗಡಿಯಾರ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿ ನಿರೀಕ್ಷೆ ಹುಟ್ಟು ಹಾಕಿದೆ .

ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇದೆ . ವಿಶೇಷ ಪಾತ್ರದಲ್ಲಿ ಎಸ್ ಪಿ ಸಾಂಗ್ಲಿಯಾನ , ವಿಶೇಷ ಅಭಿನಯದಲ್ಲಿ ಯಶ್ ಶೆಟ್ಟಿ , ಮುಖ್ಯ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ , ಶೀತಲ್ ಶೆಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ರಿಹಾಜ್ ಎಮ್ ಟಿ & ಗೌರಿ ಶಂಕರ್ ಮತ್ತು ಮುಖ್ಯ ಭೂಮಿಕೆಯಲ್ಲಿ ಶರತ್ ಲೋಹಿತಾಶ್ವ ಮತ್ತು ಸೂಚೇಂದ್ರ ಪ್ರಸಾದ ಜೊತೆಗೆ ಪ್ರದೀಪ್ ಪೂಜಾರಿ , ಗಣೇಶ್ ರಾವ್ , ಮನದೀಪ್ ರೈ , ರಾಧಾ ರಾಮಚಂದ್ರ , ಪ್ರಣಯ ಮೂರ್ತಿ , ಎಸಿಪಿ ಚಬ್ಬಿ , ವಿನಯ್ ಕುಮಾರ್ ರಾವ್ , ಲೀಲಾ ಮೋಹನ್ ಕಾಣಿಸಿಕೊಂಡಿರುವ ಗಡಿಯಾರ ಚಿತ್ರದಲ್ಲಿ ಥ್ರಿಲ್ಲರ್ ಮಂಜು ರವರ ನಾಲ್ಕು ಅದ್ಬುತ ಸಾಹಸ ಸನ್ನಿವೇಶಗಳಿವೆ . ಸಂಗೀತ ರಾಘವ್ ಸುಭಾಷ್ , ಛಾಯಾಗ್ರಹಣ ಶ್ಯಾಮ್ ಸಿಂಧನೂರ್ , ಸಂಕಲನ ಎನ್ ಎಮ್ ವಿಶ್ವ ಮಾಡಿದ್ದಾರೆ . ಹಾಡುಗಳ ಅದ್ಬುತವಾಗಿ ಮೂಡಿಬಂದಿದ್ದು , ಹೇಮಂತ್ ಕುಮಾರ್ , ವ್ಯಾಸರಾಜ್ , ಅನುರಾಧ ಭಟ್ , ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ . ಚಿತ್ರದಲ್ಲಿ ಕಾಮಿಡಿ , ಮಾಸ್ , ಲವ್ , ಹಿಸ್ಟಾರಿಕಲ್ , ಹಾರರ್ , ಥ್ರಿಲ್ಲರ್ , ಸೇರಿದಂತೆ ಎಲ್ಲಾ ಅಂಶಗಳಿದ್ದು ಚಿತ್ರ ಸಿರಿರಸಿಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಮಾತಿಲ್ಲಾ ..

Be the first to comment

Leave a Reply

Your email address will not be published. Required fields are marked *

Translate »
error: Content is protected !!