ಗಡಿಯಾರ ಚಿತ್ರದ ಹಿಂದಿ , ಮರಾಠಿ , ಭೋಜಪುರಿ, ಬೆಂಗಾಲಿ, ಗುಜರಾತಿ , ಪಂಜಾಬಿ, ಮಣಿಪುರಿ, ಓರಿಯ ಮತ್ತು ನೇಪಾಲಿ ಭಾಷೆಯ ಡಬ್ಬಿಂಗ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಟವಾಗಿದೆ.
ಬಹುತಾರಾಗಣ ಹೊಂದಿದ ಈ ಚಿತ್ರ ಕೋರೋನ ಮೊದಲ ಅಲೆಯ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಗಡಿಯಾರ ಚಿತ್ರದ ಡಬ್ಬಿಂಗ್ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿರುವ ಬಗ್ಗೆ ನಿರ್ಮಾಪಕ ಹಾಗೂ ನಿರ್ದೇಶಕ ಆಗಿರುವ ಪ್ರಬಿಕ್ ಮೊಗವೀರ್ ಸಂತಸ ವ್ಯಕ್ತಪಡಿಸಿದ್ದಾರೆ.
ಗಡಿಯಾರ ಚಿತ್ರದಲ್ಲಿ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಸಾಂಗ್ಲಿಯಾನ, ಸುಚೇಂದ್ರ ಪ್ರಸಾದ್, ಮನದೀಪ್ ರೈ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ರಾಘವ್ ಶುಭಾಷ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಚಿತ್ರದ ಮೂಲಕ ರಾಜಮನೆತನಗಳ ಇತಿಹಾಸವನ್ನು ನೆನಪಿಸುವ ವಿಷಯದ ಜೊತೆಗೆ, ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಸಾಹಸ ಸೇರಿ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳನ್ನು ಹೇಳಲು ಯತ್ನಿಸಲಾಗಿದೆ.
ಪ್ರಭಿಕ್ ಮೊಗವೀರ್ ಚಿತ್ರಕ್ಕೆ ಹಣ ಹೂಡುವ ಜೊತೆಗೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆತ್ಮ ಸಿನಿಮಾಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
_______

Be the first to comment