ಬೆಳ್ಳಿ ಪರದೆ ಮೇಲೆ ಸಾಕಷ್ಟು ಕುತೂಹಲ ಮೂಡಿಸುವ ವಿಭಿನ್ನ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಆ ನಿಟ್ಟಿನಲ್ಲಿ ವಾಮಾಚಾರ (ಬ್ಲಾಕ್ ಮ್ಯಾಜಿಕ್), ಮಾಟ ಮಂತ್ರದ ಸುತ್ತ ಸಾಗುವ ಕಥಾಹಂದರ ಇರುವ “ಗದಾಯುದ್ದ” ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು. ಜೂನ್ 9 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶ್ರೀವತ್ಸ ರಾವ್ ಅವರ ನಿರ್ದೇಶನದ ಈ ಚಿತ್ರವನ್ನು ನಿತಿನ್ ಶಿರಗೂರ್ ಕರ್ ನಿರ್ಮಾಣ ಮಾಡಿದ್ದಾರೆ. ಮೊದಲಿಗೆ ಮಾತನಾಡಿದ ಅವರು, ನಾಲ್ಕ ವರ್ಷದ ಹಿಂದೆ ನಿರ್ದೇಶಕರು ಹೇಳಿದ ಈ ಕಥೆ ನನಗೆ ಇಷ್ಡವಾಯಿತು. ಬಾನಾಮತಿ ಅಥವಾ ಬ್ಲಾಕ್ ಮ್ಯಾಜಿಕ್ ಮಹಾರಾಷ್ಡ್ರದಲ್ಲಿಯೂ ಇದೆ. ನಾನು ಅನೇಕ ಮಂದಿಯನ್ನು ಭೇಟಿ ಮಾಡಿ ಈ ಬ್ಲಾಕ್ ಮ್ಯಾಜಿಕ್ ಬಗ್ಗೆ ವಿಚಾರಿಸಿದ್ದೆ, ನನ್ನ ಮಗ ಸುಮಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾನೆ ಎಂದರು.
ಚಿತ್ರದ ಕಥೆ ಮಾಟ ಮಂತ್ರದ ಕುರಿತಾಗಿದ್ದರೂ ಇಲ್ಲಿ ಪ್ರತಿ ಪಾತ್ರವೂ ಮುಖ್ಯವಾಗಿದೆ. ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಗದಾಯುದ್ದ ತೆರೆಗೆ ಬರಲಿದೆ. ಚಿತ್ರದ ಕಥೆಗಾಗಿ ಎರಡು ವರ್ಷ ಸಿದ್ದತೆ ಮಾಡಿಕೊಂಡು ಶೂಟಿಂಗ್ ನಡೆಸಿದ್ದೇವೆ. ಚಿತ್ರದ ಪ್ರತಿ ಪಾತ್ರವೂ ಗಮನ ಸೆಳೆಯುವಂತಿದೆ ಎಂದ ನಿರ್ದೇಶಕ ಶ್ರೀವತ್ಸ ರಾವ್, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ವಾಮಾಚಾರ ನಡೆಯುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮನರಂಜನೆಯ ಜೊತೆಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ವೈಜ್ಞಾನಿಕವಾಗಿ ಚಿತ್ರದ ಕಥೆ ಮಾಡಿಕೊಂಡು ಕಮರ್ಷಿಯಲ್ ಆಗಿ ಹೇಳಲಾಗಿದೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅಯ್ಯಪ್ಪ ಶರ್ಮಾ, ಸಾಧುಕೋಕಿಲ, ಶರತ್ ಲೋಹಿತಾಶ್ವ ಸೇರಿದಂತೆ ಮತ್ತಿತರು ನಟಿಸಿದ್ದಾರೆ ಎಂದರು.
ಕ್ಲೈಮಾಕ್ಸ್ ಸಾಹಸ ದೃಶ್ಯವನ್ನು 14 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದ್ದು ನಿರ್ಮಾಪಕರು ಪೈಟ್ ಗಾಗಿಯೇ ಒಂದು ಕೋಟಿ ಖರ್ಚು ಮಾಡಿದ್ದಾರೆ. ಸತ್ಯ ಜಿತ್ ಮತ್ತು ಶಿವರಾಮಣ್ಣ ಅವರ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಿದ್ದಾರೆ ಎಂದು ಹೇಳಿದರು.
ನಾಯಕ ಸುಮಿತ್ ಮಾತನಾಡಿ ನಮ್ಮ ಕೆಲಸ ಮಾಡಿದ್ದೇವೆ. ನಮಗೆ ತೃಪ್ತಿ ಇದೆ. ಚಿತ್ರ ನೋಡಿ ಹರಸಿ, ನಾನು ಎಂದೂ ನಾಯಕನಾಗಬೇಕು ಎಂದು ಬಯಸಿರಲಿಲ್ಲ ಎಂದರೆ ನಾಯಕಿ ಧನ್ಯ ಪಾಟೀಲ್ ಮಾತನಾಡಿ ಈ ಸಬ್ಜೆಕ್ಟ್ ನನಗೆ ತುಂಬಾ ಇಷ್ಟವಾಯಿತು. ಮಾಟಗಾರ ಡ್ಯಾನಿಯಲ್ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಪಾತ್ರವನ್ನು ಮಾಡಿದ್ದೇನೆ ಎಂದರು.
ನಟಿ ಸ್ಪರ್ಶ ರೇಖಾ ಮಾತನಾಡಿ ಚಿತ್ರದಲ್ಲಿ ನಾನು ಒಬ್ಬ ನಟಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಮಾಟ ಮಂತ್ರಕ್ಕೆ ಒಳಗಾಗುವ ಸ್ಪರ್ಶ ರೇಖಾ ಆಗಿಯೇ ಕಾಣಿಸಿಕೊಂಡಿದ್ದೇನೆ ಎಂದರು. ಸಂಗೀತ ನಿರ್ದೇಶಕ ವೈಸ್ ಕಿಂಗ್ ಮಾತನಾಡಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡರು.
Be the first to comment