ಫುಲ್ ಟೈಟ್ ಪ್ಯಾತೆ ಈ ವಾರ ಬಿಡುಗಡೆ

ಬ್ರದರ್ಸ್ ಪಿಕ್ಚರ್ಸ್ ಹೌಸ್ ವತಿಯಿಂದ ತಯಾರಾಗಿರುವ `ಫುಲ್ ಟೈಟ್ ಪ್ಯಾತೆ’ ಕನ್ನಡ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಚಿತ್ರದ ನಿರ್ಮಾಣ ‘ನಾವೇ’ ಎನ್ನುತ್ತದೆ ಪೋಸ್ಟರ್.ಒಂದು ಕಡೆ ಮಧ್ಯಪಾನ ಮಾಡುತ್ತಾ ಕಥಾ ನಾಯಕ ತನ್ನ ಹೆತ್ತವರನ್ನು ಸಲಹುವ ಕೆಲಸವನ್ನು ಸಹ ಮಾಡುತ್ತಾನೆ. ಜೊತೆಗೆ ಮಧ್ಯಪಾನದಿಂದ ಆಗುವ ಅನಾಹುತವನ್ನು ಸಹ ಈ ಚಿತ್ರ ಹೇಳುತ್ತದೆ.ವೈಜಯಂತ್ ಬಿರಾದರ್ ತಂದೆ ಪಾತ್ರದಲ್ಲಿ ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ಎಲ್ ಜಿ ಪುಟ್ಟಣ್ಣ ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾನಸ ಗೌಡ, ಶಿವ ರಾಮನಗರ, ಸೂರ್ಯ ತೇಜ, ಎಂ ಎಂ ಮುರುಗ, ಅಜಯ್ ಕೃಷ್ಣಪ್ಪ, ಗಿರೀಷ್ ರಾಜು, ಆನಂದ್,ಸೈನಗ, ಬೇಬೀ ಪ್ರಾಪ್ತಿ ತಾರಗಣದಲ್ಲಿದ್ದಾರೆ.

ಮಹೇಶ್ ಪ್ರಸಾದ್ ಛಾಯಾಗ್ರಹಣ, ಜಗದೀಶ್ ಜೆ ಮತ್ತು ಗಿರೀಷ್ ಸಂಕಲನ, ಆರ್ ಎಂ ವಿ ಮತ್ತು ಸಜೀವ್ ಸಂಗೀತ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!