ಫುಲ್ ಮೀಲ್ಸ್

ಪ್ರೈಮ್ ವಿಡಿಯೋದಲ್ಲಿ ‘ಫುಲ್ ಮೀಲ್ಸ್’ ಟ್ರೆಂಡಿಂಗ್

ಲಿಖಿತ್ ಶೆಟ್ಟಿ ನಟನೆಯ ಫುಲ್ ಮೀಲ್ಸ್ ಚಿತ್ರ ಪ್ರೈಮ್ ವಿಡಿಯೋದಲ್ಲಿ ಟ್ರೆಂಡಿಂಗ್ ಆಗಿದೆ. ಇದು ಡ್ರಾಮಾ ಸಿನಿಮಾ ವಿಭಾಗದಲ್ಲಿ ಟಾಪ್ 6ನೇ ಸ್ಥಾನ ಪಡೆದಿದೆ.

ಫುಲ್ ಮೀಲ್ಸ್ ಚಿತ್ರ ಚಿತ್ರಮಂದಿರಗಳಲ್ಲಿ ನವೆಂಬರ್ 21ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ನಾಯಕ ನಟ ಆದ ಲಿಖಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ನಾಯಕಿಯಾಗಿ ಖುಷಿ ರವಿ ಕಾಣಿಸಿಕೊಂಡಿದ್ದಾರೆ.

ಫುಲ್ ಮೀಲ್ಸ್ ಚಿತ್ರದಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ನ ಲವ್ ಸ್ಟೋರಿ ಇದೆ. ಇದೊಂದು ರೊಮ್ಯಾಂಟಿಕ್ ಹಾಗೂ ಕಾಮಿಡಿ ಸಿನಿಮಾ ಆಗಿದೆ. ಚಿತ್ರವನ್ನು ಎನ್ ವಿನಾಯಕ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ತೇಜಸ್ವಿನಿ ಶರ್ಮಾ, ರಂಗಾಯಣ ರಘು, ವಿಜಯ್ ಚಂಡೂರ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಕೋಟೆ ಪ್ರಭಾಕರ್ ನಟಿಸಿದ್ದಾರೆ.

ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಕವಿರಾಜ್ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಇದೆ.

ಲಿಖಿತ್ ಶೆಟ್ಟಿ ಅವರು ಈ ಹಿಂದೆ ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ! ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಫುಲ್ ಮೀಲ್ಸ್ ಚಿತ್ರ ಅವರಿಗೆ ಒಳ್ಳೆಯ ಯಶಸ್ಸು ತಂದುಕೊಟ್ಟಿದೆ.

ಫುಲ್ ಮೀಲ್ಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!