full meals: “ಫುಲ್ ಮೀಲ್ಸ್” ಹೊಸ ಪೋಸ್ಟರ್ ರಿಲೀಸ್

ಲಿಖಿತ್ ಶೆಟ್ಟಿ, ನಟಿಸುತ್ತಿರುವ ಚಿತ್ರ “ಫುಲ್ ಮೀಲ್ಸ್”  ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

 ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

“ಸಂಕಷ್ಟಕರ ಗಣಪತಿ” ಹಾಗೂ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಹೆಸರು ಮಾಡಿರುವ ಲಿಖಿತ್ ಶೆಟ್ಟಿ, “ಫುಲ್ ಮೀಲ್ಸ್”  ನಿರ್ಮಿಸುವ ಜೊತೆಗೆ ನಾಯಕರಾಗಿ ನಟಿಸುತ್ತಿದ್ದಾರೆ.

ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!