ಲಿಖಿತ್ ಶೆಟ್ಟಿ ನಟನೆಯ ಫುಲ್ ಮೀಲ್ಸ್ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿದೆ.
ಫುಲ್ ಮೀಲ್ಸ್ ಚಿತ್ರ ಚಿತ್ರಮಂದಿರಗಳಲ್ಲಿ ನವೆಂಬರ್ 21ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ನಾಯಕ ನಟ ಅಲ್ಲದೇ ಲಿಖಿತ್ ಶೆಟ್ಟಿ ಬಂಡವಾಳ ಕೂಡ ಹೂಡಿದ್ದರು. ನಾಯಕಿಯಾಗಿ ಖುಷಿ ರವಿ ಕಾಣಿಸಿಕೊಂಡಿದ್ದರು.
ಫುಲ್ ಮೀಲ್ಸ್ ಚಿತ್ರ ವೆಡ್ಡಿಂಗ್ ಫೋಟೋಗ್ರಾಫರ್ ಲವ್ ಸ್ಟೋರಿ ಇದೆ. ಇದೊಂದು ರೊಮ್ಯಾಂಟಿಕ್ ಹಾಗೂ ಕಾಮಿಡಿ ಸಿನಿಮಾ ಆಗಿದೆ. ಎನ್ ವಿನಾಯಕ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.
ಚಿತ್ರದಲ್ಲಿ ತೇಜಸ್ವಿನಿ ಶರ್ಮಾ, ರಂಗಾಯಣ ರಘು, ವಿಜಯ್ ಚಂಡೂರ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಕೋಟೆ ಪ್ರಭಾಕರ್ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಕವಿರಾಜ್ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಇದೆ.
ಲಿಖಿತ್ ಶೆಟ್ಟಿ ಅವರು ಈ ಹಿಂದೆ ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ! ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು.





Be the first to comment