‘ಫಾರೆಸ್ಟ್’ ಮೊದಲ ಹಾಡು ಬಿಡುಗಡೆ

ಚಿಕ್ಕಣ್ಣ  ಅಭಿನಯದ  ‘ಫಾರೆಸ್ಟ್’ ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ.

‘ಓಡೋ ಓಡೋ’ ಅಂತ  ಶುರುವಾಗುವ ಹಾಡಿಗೆ ಪುನೀತ್ ಆರ್ಯ ಹಾಡು  ಬರೆದಿದ್ದಾರೆ. ಖ್ಯಾತ ಗಾಯಕ ಕೈಲಾಸ್ ಖೇರ್, ಹರ್ಷ ಉಪ್ಪಾರ್ ಧ್ವನಿಯಾಗಿದ್ದಾರೆ. ಧರ್ಮವೀರ್ ಈ ಹಾಡಿಗೆ ಸಂಗೀತ ಒದಗಿಸಿದ್ದಾರೆ. ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’, ‘ಬ್ರಹ್ಮಚಾರಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದೆ.  ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಸಿನಿಮಾಗೆ ಹಣ ಹಾಕುತ್ತಿದ್ದಾರೆ.

ಚಿತ್ರಕ್ಕೆ ವಿ ರವಿಕುಮಾರ್ ಛಾಯಾಗ್ರಹಣ , ಸಂಕಲನದ ಹೊಣೆಯನ್ನು ಅರ್ಜುನ್ ಕಿಟ್ಟು ಹೊತ್ತುಕೊಂಡಿದ್ದಾರೆ. ಧರ್ಮವೀರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿರುವ ಚಿತ್ರತಂಡ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಹಿರಿಯ ನಟ ಅವಿನಾಶ್, ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ , ಅರ್ಚನಾ ಕೊಟ್ಟಿಗೆ , ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ. ಶೇಕಡ 80ರಷ್ಟು ಸಿನಿಮಾ ಕಾಡಿನಲ್ಲಿಯೇ ಸಾಗುತ್ತದೆ. ಹಾಗಾಗಿ ಚಿತ್ರಕ್ಕೆ ‘ಫಾರೆಸ್ಟ್’ ಅಂತಲೇ ಹೆಸರಿಡಲಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!