ನಿರ್ದೇಶಕ : ಕಿಶೋರ್
ನಿರ್ಮಾಪಕ : ಸಂತೋಷ್ ಕುಮಾರ್, ಸಂತೋಷ್. ಜಿ.ಎನ್, ಕಿಶೋರ್
ತಾರಾಗಣ : ಸ್ಕಂದ ಅಶೋಕ್, ಚಂದು ಗೌಡ, ತೇಜಸ್ವಿನಿ ಶರ್ಮ, ಉಗ್ರಂ ಶರತ್, ಗಣೇಶ್ ರಾವ್ ಮುಂತಾದವರು…
ರೇಟಿಂಗ್ 3/5
ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ ಆಗಿ ಮೂಡಿ ಬಂದಿರುವ ಫ್ಲಾಟ್ # 9 ಕೊಲೆ, ಅಪರಾಧ ಲೋಕದ ಕಥೆಯನ್ನು ಹೇಳುತ್ತದೆ.
ಒಂದೇ ರೀತಿಯಲ್ಲಿ ನಡೆದ ಮೂರು ಕೊಲೆಗಳ ಹಿಂದಿನ ರಹಸ್ಯ ಕಂಡು ಹಿಡಿಯುವ ಕಥಾ ಹಂದರವನ್ನು ಚಿತ್ರ ಹೊಂದಿದೆ. ಮಾನಸಿಕ ಕಾಯಿಲೆಗೆ ಸಿಲುಕಿದಾಗ ಉಂಟಾಗುವ ಸಮಸ್ಯೆ, ಕೊಲೆ ಭೇದಿಸುವ ಕಾರ್ಯಾಚರಣೆ, ಡ್ರಗ್ಸ್ ಮಾಫಿಯಾ, ನಕಲಿ ಪಾಸ್ ಪೋರ್ಟ್ ಮೊದಲಾದ ಕಥೆ ಸಿನಿಮಾದಲ್ಲಿ ಇದೆ.
ಯುವ ನಿರ್ದೇಶಕ ಕಿಶೋರ್ ತನ್ನ ಪ್ರಥಮ ಚಿತ್ರದಲ್ಲೇ ಒಂದು ಮರ್ಡರ್ ಮಿಸ್ಟರಿ ಕಥೆಯನ್ನು ಇಂಟ್ರಸ್ಟಿಂಗ್ ರೂಪದಲ್ಲಿ ತಂದು ಗಮನ ಸೆಳೆಯುತ್ತಾರೆ. ಸಂಗೀತ ನಿರ್ದೇಶಕ ದಿನೇಶ್ ಕುಮಾರ್ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಛಾಯಾಗ್ರಹಕ ರಾಕೇಶ್ ಸಿ ತಿಲಕ್ ಕ್ಯಾಮೆರಾ ಕೈಚಳಕ ಗಮನ ಸೆಳೆಯುತ್ತದೆ.
ಪೊಲೀಸ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ಸ್ಕಂದ ಅಶೋಕ್ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಸೈಕ್ಯಾಟ್ರಿಸ್ಟ್ ಡಾಕ್ಟರ್ ಆಗಿ ಚಂದು ಗೌಡ ಚಿಕ್ಕ ಪಾತ್ರವಾದರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಚಿತ್ರದ ಕೇಂದ್ರ ಬಿಂದು ನಾಯಕಿ ತೇಜಸ್ವಿನಿ ಶರ್ಮ ವಿಭಿನ್ನ ಶೇಡ್ ಗಳಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ.
ಫ್ಲ್ಯಾಟ್ #9. ಚಿತ್ರ ಕ್ರೈಂ ಬೇಸ್ಡ್ ಚಿತ್ರವಾದರೂ ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಗೆಳೆಯರೆಲ್ಲ ಒಟ್ಟು ಸೇರಿ ಉತ್ತಮ ಚಿತ್ರ ನೀಡುವ ಯತ್ನ ಮಾಡಿದ್ದಾರೆ.
______
Be the first to comment