ಶಿವರಾಜಕುಮಾರ್ ಪುತ್ರಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರ ‘ಫೈರ್ ಫ್ಲೈ’ 17 ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಮೆಚ್ಚುಗೆ ಪಡೆಯಿತು.
“ಫೈರ್ ಫ್ಲೈ” 17 ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಯಿತು. ವಂಶಿಕೃಷ್ಣ ಶ್ರೀನಿವಾಸ್ ನಿರ್ದೇಶನದ ‘ಫೈರ್ ಫ್ಲೈ’ ಚಿತ್ರದಲ್ಲಿ ಆನಂದ್ ನೀನಾಸಂ, ರಚನಾ ಇಂದರ್, ಅಚ್ಯುತ್ ಕುಮಾರ್, ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಪ್ರದರ್ಶನದ ನಂತರ ಮಾತನಾಡಿದ ನಿರ್ಮಾಪಕಿ ನಿವೇದಿತ ಶಿವರಾಜಕುಮಾರ್, ’17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಫೈರ್ ಫ್ಲೈ’ ಚಿತ್ರ ಪ್ರದರ್ಶನವಾಗಿದ್ದು ಬಹಳ ಖುಷಿಯಾಗಿದೆ. ಆಯೋಜಕರಿಗೆ ಧನ್ಯವಾದ’ ಎಂದರು.
ನಿರ್ದೇಶಕ ವಂಶಿಕೃಷ್ಣ ಶ್ರೀನಿವಾಸ್ ಮಾತನಾಡಿ,’ ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡಿಗರ ಜೊತೆಗೆ ಹೊರ ರಾಜ್ಯ ದವರು ನಮ್ಮ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು ಸಂತೋಷವಾಗಿದೆ. ನಿವೇದಿತ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರ ‘ಫೈರ್ ಫ್ಲೈ’ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಉಪಸ್ಥಿತರಿದ್ದರು.
—-





Be the first to comment