ವಿನಯ್-ರಜತ್

ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಕೇಸ್!

ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಹಾಗೂ ರಜತ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ಹಾಕಲಾಗಿದೆ.

ಸಾರ್ವಜನಿಕ ಸ್ಥಳದಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರಿಲ್ಸ್ ಮಾಡಿದ್ದೇ  ಸಮಸ್ಯೆ ತಂದಿದೆ. ರಜತ್ ಅವರು  ದರ್ಶನ್‌ ಮೇಲಿನ ಅಭಿಮಾನವನ್ನು ಪ್ರದರ್ಶಿಸಲು ಸ್ಪೆಷಲ್‌ ಫೋಟೋಶೂಟ್‌ ಮಾಡಿಸಿ ವಿಡಿಯೋ ಅಪ್​ಲೋಡ್ ಮಾಡಿದ್ದರು.

ದರ್ಶನ್‌ ಅಭಿಮಾನಿಯಾಗಿ ರಜತ್‌   ಪ್ಯಾಂಟ್‌ ಮೇಲೆ  ದರ್ಶನ್‌ ಅವರ ಸಿನಿಮಾಗಳ ಹೆಸರುಗಳಿವೆ. ಶರ್ಟ್‌ ಮೇಲೆ “D Boss” ಎಂದೂ ಇದೆ. ಕೈಯಲ್ಲಿ ಸ್ಟೈಲಾಗಿ ಲಾಂಗ್‌ ಹಿಡಿದು ಕರಿಯ ಸಿನಿಮಾದಲ್ಲಿ ದರ್ಶನ್‌ ಅವರನ್ನೇ ಹೋಲುವಂತೆ ಪೋಸ್‌ ಕೊಟ್ಟಿದ್ದಾರೆ. ರಜತ್‌ ಹಾಕಿರುವ ಪ್ಯಾಂಟ್‌ ಮೇಲೆ ಬರೆಯಲಾದ  “ದರ್ಶನ್‌” ಎಂಬ ಹೆಸರು ಗಮನಿಸಿ  ದರ್ಶನ್‌ ಅಭಿಮಾನಿಗಳು ರಜತ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದರು.

ದರ್ಶನ್‌ ಅವರ ಶೈಲಿಯಲ್ಲೇ ಮಿಂಚುತ್ತಿದ್ದ ರಜತ್‌,  ದಚ್ಚು ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.   ರಜತ್‌ ವಿರುದ್ಧ ದಚ್ಚು ಅಭಿಮಾನಿಗಳು ಸಿಡಿದೆದ್ದಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!