‘ಬಾಹುಬಲಿ’ ಮತ್ತು ‘RRR’ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತಮ್ಮ ಹೊಸ ಚಿತ್ರ “ವಾರಣಾಸಿ” ಟೈಟಲ್ ಲಾಂಚ್ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆ ಈಗ ದುಬಾರಿಯಾಗಿದೆ. ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ರಾಜಮೌಳಿ ಅವರ ವಿರುದ್ಧ ಜನ ಆರೋಪಿಸಿದ್ದಾರೆ.
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಈ ಚಿತ್ರದ ಮೊದಲ ಟೀಸರ್ ನ್ನು ನವೆಂಬರ್ 15 ರಂದು ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಹನುಮಂತನನ್ನು ನಾನು ನಂಬುವುದಿಲ್ಲಎಂದು ಹೇಳುವ ಮೂಲಕ ಕಾರ್ಯಕ್ರಮದ ವೇಳೆ ರಾಜಮೌಳಿಯ ಹೇಳಿಕೆ ಪ್ರೇಕ್ಷಕರು ರೊಚ್ಚಿಗೇಳುವಂತೆ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಚಲನಚಿತ್ರ ನಿರ್ದೇಶಕರು ಹನುಮಂತನನ್ನು ನಾನು ನಂಬುವುದಿಲ್ಲಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ವಾನರ ಸೇನಾ ಸಂಘಟನೆಯು ಸರೂರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ದೂರು ಸ್ವೀಕರಿಸಿದ ನಂತರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಣಾಸಿ ಚಿತ್ರದ ಟೀಸರ್ ತ್ರೇತಾಯುಗದಿಂದ ಪ್ರೇರಿತವಾದ ಹನುಮಂತನ ಸಂಕ್ಷಿಪ್ತ ನೋಟವನ್ನು ಒಳಗೊಂಡಿದೆ. ಈ ಚಿತ್ರವು ಪುರಾಣಗಳನ್ನು ಆಧುನಿಕ ಕಥೆ ಹೇಳುವಿಕೆಯೊಂದಿಗೆ ಬೆರೆಸುವ, ಪ್ರಾಚೀನ ಕಾಲದಲ್ಲಿ ಅಡಗಿರುವ ನಿಧಿಯ ಹುಡುಕಾಟವನ್ನು ಚಿತ್ರಿಸುವ ಸಾಹಸ ಚಿತ್ರ ಎಂದು ವರದಿಯಾಗಿದೆ.
—-





Be the first to comment