ಕನ್ನಡದ ‘ರಣಾಕ್ಷ’ ಸಿನಿಮಾದ ನಿರ್ಮಾಪಕ ಶಿವರಾಮ್ ಮೇಲೆ ನಾಯಕಿಯಾಗಿ ಆಯ್ಕೆ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2023ರಲ್ಲಿ ಸಿನಿಮಾದ ಶೂಟಿಂಗ್ ಆರಂಭಿಸಿದ ನಿರ್ಮಾಪಕ ಶಿವರಾಜ್ ಚಿತ್ರಕ್ಕೆ ಪೂಜಾ ಎಂಬುವವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಮಗಳ ಸಿನಿಮಾದ ಶೂಟಿಂಗ್ ನೋಡಲು ಸೆಟ್ ಬಂದಿದ್ದ ತಾಯಿ ಸುನಂದಾಗೂ ಚಿತ್ರದ ನಿರ್ಮಾಪಕ ಶಿವರಾಮ್ ಗೂ ಪರಿಚಯವಾಗಿದೆ. ಶೂಟಿಂಗ್ಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದು ನಟಿಯ ತಾಯಿಯ ಬಳಿ 5 ಲಕ್ಷ ರೂ.ವನ್ನು ಶಿವರಾಮ್ ಪಡೆದರು. ನಂತರ ಚಿತ್ರದ ಶೂಟಿಂಗ್ ನಡೆಸಿ ಸಮಯಕ್ಕೆ ಸರಿಯಾಗಿ ಆ ಹಣವನ್ನು ಶಿವರಾಮ್ ಹಿಂದಿರುಗಿಸಿದರು.
ಕೆಲವು ದಿನಗಳ ಬಳಿಕ ಶಿವರಾಮ್ ಮತ್ತೆ ನಟಿಯ ತಾಯಿ ಸುನಂದಾಗೆ ಕರೆ ಮಾಡಿ ಇನ್ನೊಂದಿಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮಹಿಳೆ 575 ಗ್ರಾಂ ಚಿನ್ನವನ್ನು ಶಿವರಾಮ್ಗೆ ನೀಡಿದ್ದರು. ಶ್ಯೂರಿಟಿಗಾಗಿ ಎರಡು ಚೆಕ್ಗಳನ್ನು ನಟಿಯ ತಾಯಿಗೆ ನೀಡಿದ್ದರು. ಆದರೆ ಚೆಕ್ ಅವಧಿ ಮುಗಿದಿದ್ದರೂ ಚಿನ್ನಾಭರಣ ನೀಡದೇ ನಿರ್ಮಾಪಕ ವರಸೆ ಬದಲಿಸಿದ್ದಾರೆ. ಈ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ವಿರುದ್ಧ ಸುನಂದಾ ಎಫ್ಐಆರ್ ದಾಖಲಿಸಿದ್ದಾರೆ.
![](https://bcinemas.in/wp-content/uploads/2020/11/whatsapp.png)
Be the first to comment