ಕಿರುತೆರೆ ನಟಿ ವಿರುದ್ಧ ಎಫ್ಐಆರ್ !

ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶಶಿಕಲಾ ವಿರುದ್ಧ ‘ಪ್ರಜಾರಾಜ್ಯ’ ಚಿತ್ರದ ನಿರ್ದೇಶಕ ಹರ್ಷವರ್ಧನ್  ದೂರು ನೀಡಿದ್ದಾರೆ. ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿದ್ದು, ದೂರವಿದ್ದರೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ.

ಹರ್ಷವರ್ಧನ್  ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಶೂಟಿಂಗ್‌ ವೇಳೆ ಶಶಿಕಲಾ ಅವರ ಪರಿಚಯವಾಗಿ ನಂಬರ್ ಪಡೆದಿದ್ದರು. ಬಳಿಕ ಶಶಿಕಲಾ ಸಿನಿಮಾಗೆ ಬಂಡವಾಳ ಹಾಕುತ್ತೇನೆ ಎಂದು ನಂಬಿಸಿ ತನ್ನೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವಂತೆ ಒತ್ತಾಯಿಸಿದ್ದರು. ಸಿನಿಮಾಗಾಗಿಹರ್ಷವರ್ಧನ್  ಆ ಒಪ್ಪಂದಕ್ಕೆ ಒಪ್ಪಿದ್ದರು ಎನ್ನಲಾಗಿದೆ.

ಸಿನಿಮಾಗೆ ಹಣ ಹಾಕುತ್ತೀರಿ ಎಂಬ ಕಾರಣಕ್ಕಷ್ಟೇ  ಸಂಬಂಧ ಬೆಳೆಸಲು ಒಪ್ಪಿದ್ದೇನೆ. ಆದರೆ ಯಾವ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಹರ್ಷವರ್ಧನ್  ಕಂಡೀಷನ್‌ ಹಾಕಿದ್ದರು. ಇದನ್ನು ನಟಿ ಒಪ್ಪಿಕೊಂಡು ಬಳಿಕ ತನ್ನನ್ನು ಮದುವೆಯಾಗುವಂತೆ ಕಿರುಕುಳ ನೀಡಿದ್ದಾರೆ. ನಾನು ಮದುವೆ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿದ್ದರು. ನೆಗೆ ನನ್ನ ವಿರುದ್ಧ ಸುಳ್ಳು ಕೇಸ್‌ ಹಾಕಿಸಿ ಜೈಲಿಗೆ ಕಳಿಸಿದ್ದರು ಎಂದಿದ್ದಾರೆ ಹರ್ಷವರ್ಧನ್.

ಜೈಲಿನಿಂದ ಬಂದ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೆರಿಯರ್‌ ಹಾಳಾಗುತ್ತದೆ ಎಂದು ಹಲವರು ನೀಡಿದ ಸಲಹೆ ಮೇರೆಗೆ ಮದುವೆಯಾದೆ. ಮದುವೆ ನಂತರ ಮನೆಗೆ ನಿರ್ಮಾಪಕರು, ನಿರ್ದೇಶಕರು ಬಂದು ಹೋಗುತ್ತಿದ್ದರು. ಅವರು ಬಂದಾಗ ನನ್ನ ಹೊರಗೆ ಕಳಿಸ್ತಿದ್ರು. ಇದೆಲ್ಲ ಸರಿಯಲ್ಲ ಎಂದು ಹೇಳಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!