Amithab: ಅಮಿತಾಬ್, ಅನುಷ್ಕಾಗೆ ಲಿಫ್ಟ್‌ ನೀಡಿದವರಿಗೆ ಬಿತ್ತು ದಂಡ

ಹೆಲ್ಮೆಟ್ ಧರಿಸದೆ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾಗೆ ಲಿಫ್ಟ್ ನೀಡಿದ ಬೈಕ್ ಸವಾರರಿಗೆ ಮುಂಬೈ ಪೊಲೀಸರು ದಂಡದ ರುಚಿ ತೋರಿಸಿದ್ದಾರೆ.

ಮುಂಬೈಯಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ಲಿಫ್ಟ್‌ ನೀಡಿದ ಸವಾರರಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ ನಂತರ ಬೈಕ್‌ ಸವಾರರಿಗೆ ದಂಡ ವಿಧಿಸಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ಎರಡೂ ವಾಹನಗಳ ಸವಾರರ ವಿರುದ್ಧ ಜಾರಿ ಮಾಡಿದ ದಂಡದ ಚಲನ್‌ಗಳ ಪ್ರತಿಗಳನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪೊಲೀಸರು ವಾಹನ ಸವಾರನ ವಿರುದ್ಧ 10,500 ರೂ. ದಂಡ ಹಾಕಿದ್ದಾರೆ. “ಚಾಲಕನಿಗೆ ಸೆಕ್ಷನ್ 129/194(ಡಿ), ಸೆಕ್ಷನ್ 5/180 ಮತ್ತು ಸೆಕ್ಷನ್ 3(1)181 ಎಂವಿ ಆಕ್ಟ್ ಅಡಿಯಲ್ಲಿ 10500 ರೂ. ದಂಡದೊಂದಿಗೆ ಚಾಲಕನಿಗೆ ಚಲನ್ ನೀಡಲಾಗಿದೆ” ಎಂದು ಮುಂಬೈ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಹಿಂಬದಿ ಸವಾರಿ ಮಾಡಿದ್ದರು. ಟ್ರಾಫಿಕ್ ನಿಂದ ತಪ್ಪಿಸಿಕೊಂಡು ಶೂಟಿಂಗ್ ಸ್ಪಾಟ್ ಗೆ ತೆರಳಲು ಅಮಿತಾಬ್ ಬಚ್ಚನ್ ಬೈಕ್ ಸವಾರರೊಬ್ಬರ ಸಹಾಯ ಪಡೆದಿದ್ದರು. ಈ ವೇಳೆ ಬೈಕ್ ಸವಾರರಾಗಲೀ , ಹಿಂಬದಿ ಕುಳಿತಿದ್ದವರಾಗಲೀ ಹೆಲ್ಮೆಟ್ ಧರಿಸಿರಲಿಲ್ಲ. ಈ ಬಗ್ಗೆ ನೆಟ್ಟಿಗರು ಪೊಲೀಸರ ಟ್ವಿಟರ್ ಹ್ಯಾಂಡಲ್‌ ಮೂಲಕ ದೂರು ನೀಡಿದ್ದರು.


—–

Be the first to comment

Leave a Reply

Your email address will not be published. Required fields are marked *

Translate »
error: Content is protected !!