ಪ್ರಯಾಗ್ ರಾಜ್ ನ ಮಹಾ ಕುಂಭಮೇಳದಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ನಟಿ, ನಿರೂಪಕಿ ಅನುಶ್ರೀ ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ ಹಲವರು ಪವಿತ್ರ ಸ್ನಾನ ಮಾಡಿದ್ದಾರೆ.
ನಿರ್ದೇಶಕ ರಾಜ್ ಬಿ ಶೆಟ್ಟಿ ಅವರಿಗೆ ನಿರೂಪಕಿ ಅನುಶ್ರೀ, ಚಾರ್ಲಿ 777 ನಿರ್ದೇಶಕ ಕಿರಣ್ ರಾಜ್ ಸಾಥ್ ನೀಡಿದ್ದಾರೆ. ಜೊತೆಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ಕಾಂತಾರಾ ಸಿನಿಮಾ ಖ್ಯಾತಿಯ ರಂಜನ್ ಎಸ್ ಹಾಗೂ ಮತ್ತಿತರರು ಕೂಡ ಭಾಗಿಯಾಗಿದ್ದಾರೆ. ರ್ದೇಶಕ ರಾಜ್ ಬಿ. ಶೆಟ್ಟಿ, ಅನುಶ್ರೀ, ಕಿರಣ್ ರಾಜ್, ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಬಿಳಿ ಶರ್ಟ್, ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ ಧರಿಸಿ, ಹಣೆ ಮೇಲೆ ಗಂಧವನ್ನು ಹಚ್ಚಿ ಅದರ ಮೇಲೆ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಸಾವನ್ನಪ್ಪಿರುವುದನ್ನು ಯೋಗಿ ಸರ್ಕಾರ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಪವಿತ್ರ ಸ್ನಾನ ಮಾಡಲು ಪ್ರಯಾಗ್ ರಾಜ್ ಗೆ ಬರುವ ನಿರೀಕ್ಷೆ ಇದೆ.
Be the first to comment